ನವದೆಹಲಿ : ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರನಾ ವೈರಸ್ ಗೆ ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳು ಔಷಧಿ ಕಂಡುಹಿಡಿಯಲು ಪ್ರಯತ್ನ ನಡೆಸಿವೆ. ಈ ನಡುವೆ ಭಾರತ್ ಬಯೋಟೆಕ್ ಮತ್ತು ಜಿಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೊವಾಕ್ಸಿನ್ ನ ಮಾನವ ಕ್ಲಿನಿಕಲ್ ಪ್ರಯೋಗವು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಾಳೆ ನಡೆಯಲಿದೆ.
ನಾಳೆಯಿಂದ ಏಮ್ಸ್ ನಲ್ಲಿ ಕೋವಿಡ್ ಲಸಿಕೆ ಕೊವಾಕ್ಸಿನ್ ಮಾನವ ಕ್ಲಿನಿಕಲ್ ಪ್ರಯೋಗ ನಡೆಯಲಿದ್ದು, ಆರೋಗ್ಯವಂತ ಮತ್ತು ಕೋವಿಡ್ 19 ಇಲ್ಲದವರನ್ನು ಪ್ರಯೋಗಕಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಏಮ್ಸ್ ಪ್ರಾಧ್ಯಾಪಕ ಸಂಜಯ್ ರೈ ಮಾಹಿತಿ ನೀಡಿದ್ದಾರೆ.
18 ರಿಂದ 55 ವರ್ಷ ವಯೋಮಾನದವರ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗಿಸಲಾಗುವುದು. ಯಾವುದೇ ಆರೋಗ್ಯವಂತ ವ್ಯಕ್ತಿಯು ಪ್ರಯೋಗದಲ್ಲಿ ಭಾಗವಹಿಸಲು ಇಮೇಲ್ ಮೂಲಕ ಅಥವಾ ಎಸ್‌ಎಂಎಸ್ ಅಥವಾ 7428847499 ಕರೆ ಮಾಡಬಹುದು.ಮೊದಲ ಮತ್ತು ಎರಡನೇ ಹಂತದಲ್ಲಿ375 ಸ್ವಯಂ ಸೇವಕರಲ್ಲಿ 100 ಮಂದಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.