Breaking News

ಕೋವಿಡ್ 19 ಪರಿಹಾರ ನಿಧಿಗೆ ಶಿವರಾಮೇಗೌಡರು ನೀಡಿದ 2ಲಕ್ಷರೂಗಳ ಸಹಾಯ ಧನದ ಚೆಕ್ಕನ್ನು ಸ್ವೀಕರಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ವಿ. ಆರ್.ಶೈಲಜಾ

Spread the love

ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಉಧ್ಯಮಿಗಳು ಹಾಗೂ ಸಮಾಜಸೇವಕರು ಹಾಗೂ ಯಶಸ್ವಿನಿ ಸಮುದಾಯ ಭವನದ ಮಾಲೀಕರಾದ ಶಿವರಾಮೇಗೌಡ ಅವರು.

ಮುಖ್ಯಮಂತ್ರಿಗಳ.ಕೋವಿಡ್-19 ಪರಿಹಾರ ನಿಧಿಗೆ 2ಲಕ್ಷರೂ ಪರಿಹಾರ ಧನದ ಚೆಕ್ಕನ್ನು ವಿತರಿಸಿದರು.

ಕೋವಿಡ್ 19 ಪರಿಹಾರ ನಿಧಿಗೆ ಶಿವರಾಮೇಗೌಡರು ನೀಡಿದ 2ಲಕ್ಷರೂಗಳ ಸಹಾಯ ಧನದ ಚೆಕ್ಕನ್ನು ಸ್ವೀಕರಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ವಿ. ಆರ್.ಶೈಲಜಾ ಸಮಾಜದಲ್ಲಿ ಉಳ್ಳವರು ದಾನ ಧರ್ಮ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.

ಉಧ್ಯಮಿಗಳಾದ ಶಿವರಾಮೇಗೌಡ ಅವರು ಈಗಾಗಲೇ ಸಾಂಸ್ಥಿಕ ಹೋಂ ಕ್ವಾರಂಟೈನ್ ನಲ್ಲಿರುವ 1200ಜನರಿಗೆ ಒಂದು ದಿನ ಚಿಕನ್ ಬಿರಿಯಾನಿ ಊಟವನ್ನು ಕೊಡಿಸಿ ಹೃದಯವೈಶಾಲ್ಯತೆಯನ್ನು ಮೆರೆದಿದ್ದರು.

ಪ್ರಸ್ತುತ ಕೊರೋನಾ ಸಂಕಷ್ಠವನ್ನು ಅರಿತು ಹೆಚ್ಚುವರಿಯಾಗಿ 2ಲಕ್ಷರೂ ಧನ ಸಹಾಯ ಮಾಡಿ ಸಮಾಜದಲ್ಲಿನ ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಕೆ.ಶಿವರಾಮೇಗೌಡ, ದಾನಿಗಳಾದ ಶಿವರಾಮೇಗೌಡರ ಪತ್ನಿ ಶಾಂತ, ಪುತ್ರಿ ಯಶಸ್ವಿನಿ(ಸೋನು), ಚಿಕ್ಕೋನಹಳ್ಳಿ ಜಾಣೇಗೌಡರು, ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ನನ್ನ ತಂದೆಯ ಸೇವಾ ಕಾರ್ಯಗಳ ಬಗ್ಗೆ ನನಗೆ ಹೆಮ್ಮೆಯಿದೆ.

ಯಶಸ್ವಿನಿ. ಶಿವರಾಮೇಗೌಡ ಅವರು ಎರಡು ಲಕ್ಷರೂ ಹಣವನ್ನು ಕೋವಿಡ್ ನಿಧಿಗೆ ಪರಿಹಾರ ನೀಡಿದ್ದು ಹಾಗೂ ಮುಂಬೈ ಕನ್ನಡಿಗ ಬಂಧುಗಳಿಗೆ ಚಿಕನ್ ಬಿರಿಯಾನಿ ಊಟ ಹಾಕಿಸಿದ್ದಕ್ಕೆ ನನಗೆ ನನ್ನ ತಂದೆಯವರ ಬಗ್ಗೆ ಹೆಮ್ಮೆಯಿದೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯವನ್ನು ನನ್ನ ತಂದೆ ಮಾಡಲಿದ್ದಾರೆ.
ನಾನು ಶಿವರಾಮೇಗೌಡರ ಮಗಳು ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಎಂದು ಅಭಿಮಾನದಿಂದ ಹೇಳಿದರು.


Spread the love

About Laxminews 24x7

Check Also

‘ಪಕ್ಷ ಭೇದ ಮರೆತು ಕೆಲಸ ಮಾಡಿದಾಗ ಮಾತ್ರ ಬೆಂಗಳೂರಿಗೆ ಸಮಾನಾಂತರವಾಗಿ ಬೆಳಗಾವಿ ಜಿಲ್ಲೆಯೂ ಬೆಳೆಯಲು ಸಾಧ್ಯ: ಸತೀಶ ಜಾರಕಿಹೊಳಿ

Spread the loveಬೆಳಗಾವಿ: ”ಪಕ್ಷ ಭೇದ ಮರೆತು ಕೆಲಸ ಮಾಡಿದಾಗ ಮಾತ್ರ ಬೆಂಗಳೂರಿಗೆ ಸಮಾನಾಂತರವಾಗಿ ಬೆಳಗಾವಿ ಜಿಲ್ಲೆಯೂ ಬೆಳೆಯಲು ಸಾಧ್ಯವಾಗುತ್ತದೆ” ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ