ಮಂಡ್ಯ ಜಿಲ್ಲೆ ಹೊಸಹೊಳಲು ಗ್ರಾಮದ ವಿಜಯನಗರ ಬಡಾವಣೆಯ ನಿವಾಸಿ ಯಶೋಧಮ್ಮ ಅವರಿಗೆ ಸೇರಿದ ಎಮ್ಮೆಗಳು ನೀರು ಕುಡಿಯಲು ಹೋದ ಸಂದರ್ಭದಲ್ಲಿ ವಿದ್ಯುತ್ ತಂತಿ ಹರಿದು ನಾಲೆಯಲ್ಲಿ ಬಿದ್ದ ಪರಿಣಾಮವಾಗಿ ಎರಡು ಎಮ್ಮೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ 9:30 ರ ಸಮಯದಲ್ಲಿ ಜರುಗಿದೆ. ಕೆಇಬಿ ಇಲಾಖೆಯವರು ಎಮ್ಮೆಗಳನ್ನು ಕಳೆದುಕೊಂಡ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಒದಗಿಸುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.ಈ ಬಗ್ಗೆ ತುರ್ತು ಕ್ರಮ ಜರುಗಿಸುವಂತೆ ಆಗ್ರಹಿಸುತ್ತೇನೆ. ಲೋಕೇಶ್. ಪುರಸಭೆ ಸದಸ್ಯರು.
