ಮಂಡ್ಯ ಜಿಲ್ಲೆ ಸಂವಿಧಾನಶಿಲ್ಪಿ, ಭಾರತರತ್ನ, ಶೋಷಿತರು ಹಾಗೂ ತುಳಿತಕ್ಕೊಳಗಾದವರ ಧೀಶಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತ್ಯೋತ್ಸವವನ್ನು ಕೊರೋನಾ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಆಚರಿಸಲಾಯಿತು
ರಾಜ್ಯದ ಪೌರಾಡಳಿತ, ರೇಷ್ಮೆ ಹಾಗೂ ಪೌರಾಡಳಿತ ಖಾತೆಗಳ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.
ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ನಾರಾಯಣಗೌಡ ಮಾತನಾಡಿ ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಜನಸಾಮಾನ್ಯರು ಮನೆಯಲ್ಲಿಯೇ ಇದ್ದುಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.. ದಾನಿಗಳು ಸಮಾಜದಲ್ಲಿ ಬಡಜನರು ಹಸಿವಿನಿಂದ ಬಳಲದಂತೆ ಉದಾರವಾಗಿ ಸಹಾಯ ಮಾಡಬೇಕು.
*ಕೃಷ್ಣರಾಜಪೇಟೆಯ ಕಲ್ಲಹಳ್ಳಿಯ ಭೂವರಹನಾಥ ದೇವಾಲಯದ ದಾಸೋಹ ಟ್ರಸ್ಟ್ ಎರಡು ಸಾವಿರಕ್ಕೂ ಹೆಚ್ಚಿನ ಬಡಜನರು ಹಾಗೂ ಕೃಷಿಕೂಲಿ ಕಾರ್ಮಿಕರಿಗೆ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದು ಲಾಕ್ ಡೌನ್ ಮೇ.3ರ ವರೆಗೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಊಟ ಪ್ರಸಾದವನ್ನು ನೀಡಲು ಬದ್ಧವಾಗಿದೆ. ಮೈಸೂರಿನ ಪರಕಾಲಮಠದ ಶ್ರೀಗಳು ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಅವರಿಗೆ ಆಭಾರಿಯಾಗಿರುವುದಾಗಿ ತಿಳಿಸಿದರು.ರೈತರು ಬೆಳೆದಿರುವ ಹಣ್ಣು ತರಕಾರಿಗಳ ಮಾರಾಟ ಹಾಗೂ ಸಾಗಾಣಿಕೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು.ಕೊರೋನಾ ಸಂದಿಗ್ಧ ಸಮಯದಲ್ಲಿ ಜನಸಾಮಾನ್ಯರಿಗೆ ಯಾವುದೇ ತೊಂದರೆಗಳಾಗದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಕೈಮುಗಿದು ಮನವಿ ಮಾಡಿದರು*
ತಹಶೀಲ್ದಾರ್ ಎಂ. ಶಿವಮೂರ್ತಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಚಂದ್ರಮೌಳಿ, ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು,
ಕೃಷಿ ಅಧಿಕಾರಿ ಮಂಜುನಾಥ್, ತೋಟಗಾರಿಕೆ ಅಧಿಕಾರಿ ಲೋಕೇಶ್, ಜಯರಾಂ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಗಳಾದ ಬ್ಯಾಟರಾಯಗೌಡ, ಲಕ್ಷ್ಮಣ್,
ಅಗ್ನಿಶಾಮಕ ಅಧಿಕಾರಿ ಶ್ರೀನಿವಾಸರಾವ್, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಬಿಸಿಎಂ ಅಧಿಕಾರಿ ವೆಂಕಟೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿ.ಪಂ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್, ಚಲನಚಿತ್ರ ನಟ ಅರವಿಂದರಾವ್, ಉಧ್ಯಮಿ ಕೆ.ಪಿ.ಜಯಂತ್, ಸಚಿವರ ಆಪ್ತಸಹಾಯಕರಾದ ದಯಾನಂದ,
ಕಿಕ್ಕೇರಿ ಕುಮಾರ್, ಪುರಸಭೆಯ ಸದಸ್ಯರಾದ ಕೆ.ವಿನೋದ್, ದಿನೇಶ್, ಕೆ.ಆರ್.ಹೇಮಂತಕುಮಾರ್, ಮಹಾದೇವಿ ನಂಜುಂಡ, ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.