ಮೈಸೂರು: ರೈಸ್ ಪುಲ್ಲಿಂಗ್ ಸಾಮಗ್ರಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ ಐವರನ್ನು ಮೈಸೂರು ದೇವರಾಜ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡಿನ ಚಂದ್ರಮೋಹನ್(57), ಕೇರಳದ ಟಿ.ವಿ.ಇಬ್ರಾಹಿಂ (50), ಬೆಂಗಳೂರಿನ ಕೆ.ಆರ್.ಗಿರಿನಾಥನ್(49), ಎಂ.ಗೋಪಿ(40),ಚಾಮರಾಜನಗರದ ಇರ್ಷದ್ ಖಾನ್ ಎಂದು ಗುರುತಿಸಲಾಗಿದೆ.
ಮೈಸೂರಿನ ಹೋಟೆಲೊಂದರಲ್ಲಿ ಕುಳಿತು ಬಕ್ರಗಳಿಗಾಗಿ ಹುಡುಕಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಖದೀಮರನ್ನು ಬಂಧಿಸಿದ್ದಾರೆ.ಶ್ರೀಮಂತರನ್ನ ಟಾರ್ಗೆಟ್ ಮಾಡಿದ್ದ ಇವರು, ಮತ್ತಷ್ಟು ಶ್ರೀಮಂತರಾಗಬಹುದು, ಭೂಮಿ ಖರೀದಿಸಲು ಅನುಕೂಲವಾಗುತ್ತದೆ ಎಂದು ಇನ್ನಿಲ್ಲದ ಆಸೆ ಹುಟ್ಟಿಸಿ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು.ಖರೀದಿಸಲು ನಿರಾಕರಿಸಿದ್ರೆ ಯಾವುದಾದರೂ ಭಯ ಹುಟ್ಟಿಸಿ ಮಾರಾಟ ಮಾಡುತ್ತಿದ್ದರು.
Laxmi News 24×7