Breaking News

ವಿಷಯ: ರೈತರಿಗೆ ಸ್ಪಂದಿಸುತ್ತಿರುವ ತೊಟಗಾರಿಕೆ ಅಧಿಕಾರಿ

Spread the love

 

ಕೊಣ್ಣೂರ :ಮಾಹಾಮಾರಿ ಕೊರಾನಾ ಇಡಿ ವೀಶ್ವವನ್ನೆ ಆತಂಕದಲ್ಲಿ ಕೆಡವಿ ಲೆಕ್ಕಕ್ಕೆ ಬಾರದಷ್ಟು ಸಾವುನ್ನು ಪಡೆದುಕೊಳ್ಳತ್ತಾ ಇದೆ ಅದರಲ್ಲೂ ದೇಶದ ಬೆನ್ನೆಲುಬು ಅನಿಸಿಕೊಂಡಿರುವ ರೈತನ ಪಾಡಂತು ಹೇಳೊಕೆ ಆಗೊಲ್ಲಾ

ಹೌದು ಕೊರಾನಾ ಇವತ್ತು ಯಾರನ್ನು ಬಿಟ್ಟಿಲ್ಲ, ಅಂತದರಲ್ಲಿ ಮಳೆ,ಬಿಸಿಲು ಅನ್ನದೆ ಬೇರೆಯವರ ಹತ್ತಿರ ಸಾಲ ಮಾಡಿ ಹೊಲದಲ್ಲಿ ಬೆಳೆದ ಬೆಳೆಗೆ ಸರಿಯಾಗಿ ನಿಗದಿತ ಬೆಲೆ ಸಿಗದ ಪರಿಸ್ಥಿತಿ ಒಂದು ಕಡೆಯಾದರೆ ಕೊರಾನಾ ಲಾಕಡೌನ್ ನಿಂದ ಸಾರಿಗೆ, ಹೋಟೆಲ್ ,ದಾಭಾ,ಮದುವೆಗಳು ಬಂದು ಮಾಡಿದಾಗಿನಿಂದ ತರಕಾರಿ ಬೆಳೆ ಮಾರಾಟವಾಗದೆ ತೊಂದರೆಯಾಗಿ ಹೊಲದಲ್ಲಿಯೆ ಕೊಳೆತು ಹೋಗುವ ಪರಿಸ್ಥಿತಿ ಬಂದೊದಗಿದೆ,ಹೀಗಿರುವಾಗ ದೇಶಕ್ಕೆ ಅನ್ನ ನೀಡುವ ರೈತನಿಗೆ ಯಾವುದೆ ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ

ಗೋಕಾಕ ತಾಲೂಕಿನ ಹಿರಿಯ ತೊಟಗಾರಿಕೆ ನಿರ್ದೇಶಕರಾದ ಮಲ್ಲಿಕಾರ್ಜುನ ಜನಮಟ್ಟಿ ಇವರು ಯಾವುದೆ ರೈತ ಅಥವಾ ಯಾರಾದರೂ ಮಾರಾಟವಾಗದ ತರಕಾರಿ ಮತ್ತು ರೈತನ ಬಗ್ಗೆ ಕರೆ ಮಾಡಿ ಹೇಳಿದರೆ ಸಾಕು ರೈತನ ಸಂಪೂರ್ಣ ಮಾಹಿತಿ ಪಡೆದು ತಾವೆ ಖುದ್ದಾಗಿ ರೈತನ ಹೊಲಕ್ಕೆ ಹೋಗಿ ಬೆಳೆದ ತರಕಾರಿಯನ್ನು ನೋಡಿ ಮೊದಲು ಅವರಿಗೆ ದೈರ್ಯ ತುಂಬಿ ನಂತರ ಅವರಿಗೆ ಗೊತ್ತಿರುವ ರೀತಿಯಲ್ಲಿ ಮತ್ತು ಹೊಲಸೇಲ್ ವ್ಯಾಪಾರಿಗಳಿಗೆ ಮಾತನಾಡಿ ,ತಾವೆ ಒಂದು ತರಕಾರಿ ತೆಗೆದುಕೊಂಡ. ಮಾರುವವರ ವಾಟ್ಸಪ್ ಗ್ರುಪ್ ಮಾಡಿ ರೈತನಿಗೆ ಒಳ್ಳೆಯ ದರ ಸಿಗಬೇಕೆಂದು ರೈತನ ತರಕಾರಿಯನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ಇದರಿಂದ ಸುಮಾರು 250 ಜನ ರೈತರ ತರಕಾರಿ ಬೆಳೆಯನ್ನು ಮಾರಾಟ ಮಾಡಿ ಕೊಣ್ಣೂರಿನ ಅಶೋಕ ಗುರವ ಎಂಬ ರೈತ ಬೆಳೆದ ಸುಮಾರು 3 ಎಕರೆ ಬದನೆಕಾಯಿಯನ್ನು ಜಿಲ್ಲಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಮಾರಾಟ ಮಾಡಲು ವ್ಯವಸ್ಥೆ ಮಾಡಿಸಿ ರೈತರಿಗೆ ದೈರ್ಯದಿಂದ ಇರಲು ಹೇಳಿದರು ರೈತರಿಗೆ ಸ್ಪಂದಿಸುತಿದ್ದಾರೆ.ಅದಲ್ಲದೆ ಒಂದು ವೇಳೆ ರೈತನೆ ಖುದ್ದಾಗಿ ತಾನು ಬೆಳೆದ ತರಕಾರಿ ಮಾರಾಟ ಮಾಡಲು ಮುಂದಾದರೆ ಅದಕ್ಕೂ ಕೂಡ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ತೊಟಗಾರಿಕೆ ಅಧಿಕಾರಿ ಸಿದ್ದಾರೂಡ ಮರಗಾಲ, ತೋಟಗಾರಿಕೆ ಸಹಾಯಕ ಲೋಕನಾಯಕ,ನಾಯಕ,ಸ್ಥಳಿಯ ಮುಖಂಡರಾದ ವಿರುಪಾಕ್ಷಿ ಯಲಿಗಾರ, ರೈತರಾದ ಅಶೋಕ ಗುರವ, ಕೆಂಪಣ್ಣಾ,, ರೈತರು ಹಾಗೂ ಸ್ಥಳಿಯರು ಉಪಸ್ಥಿತರಿದ್ದು ತೊಟಗಾರಿಕೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆ ತಿಳಿಸಿದರು.


Spread the love

About Laxminews 24x7

Check Also

ಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು

Spread the loveಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು ಸುಮಾರು ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳು ಅಟೊ ರೀಕ್ಷಾದಲ್ಲಿ ನೇಣಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ