Breaking News

ವಿಶ್ವ ಮಾದಕ ದ್ರವ್ಯಗಳ ಸೇವನೆ ಹಾಗು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪದಾಯತ್ರೆ: ಹಾವೇರಿ

Spread the love

ಸವಣೂರ: ಇಂದಿನ ಯುವ ಜನಾಂಗ ಮಾಧಕ ವ್ಯಸನಗಳಿಗೆ ದಾಸರಾಗುವ ಮೂಲಕ ಆರೋಗ್ಯದ ಜೊತೆ ಉತ್ತಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಯೋಗಿಶ್ವರ ಎಸ್. ಕಳವಳ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲಾ ಪೊಲೀಸ್ ಶಿಗ್ಗಾಂವ ಉಪ ವಿಭಾಗದ ಹಾಗೂ ಸವಣೂರ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾದಕ ದ್ರವ್ಯಗಳ ಸೇವನೆ ಹಾಗು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪದಾಯತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾದಕ ದ್ರವ್ಯಗಳ ಸೇವನೆಯಿಂದ ಆರೋಗ್ಯದ ಜೊತೆಗೆ ಕುಟುಂಬದ ನೆಮ್ಮದಿ ಹಾಳಾಗಿ ಹಲವಾರು ಕುಟುಂಬಗಳು ಬೀದಿಗೆ ಬರುವಂತಾಗಿವೆ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಲು ದುರ್ವ್ಯಸನಗಳಿಂದ ದೂರವಿದ್ದಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಗುವುದಷ್ಟೇ ಅಲ್ಲದೇ ಮಾನಸಿಕ ಖಿನ್ನತೆಯನ್ನುಂಟು ಮಾಡಲಿದ್ದು, ಯುವ ಜನಾಂಗವನ್ನು ದುರ್ಮಾರ್ಗದತ್ತ ಕರೆದೊಯ್ದು ಅಪರಾಧಗಳು ಹಚ್ಚಳಗೊಳ್ಳಲು ಕಾರಣವಾಗಲಿದೆ. ಮಾದಕ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದು ಸಹ ಶಿಕ್ಷಾರ್ಹ ಅಪರಾಧವಾಗಲಿದೆ. ಆದ್ದರಿಂದ ಯುವ ಜನತೆ ಜಾಗೃತಗೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಸಶಕ್ತರಾಗಬೇಕೆಂದು ಕರೆ ನೀಡಿದರು.

ಮಾದಕ ದ್ರವ್ಯಗಳ ಸೇವನೆ ಹಾಗು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪಾದಯಾತ್ರೆಯು ಕಂದಾಯ ಇಲಾಖೆ ಆವರಣದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಂದಾಯ ಆವರಣದಲ್ಲಿ ಸಮಾರೋಪಗೊಂಡಿತು. ಪಾದಯಾತ್ರೆ ಉದ್ದಕ್ಕೂ ಸರ್ಕಾರದ ಆದೇಶದ ಮೇರೆಗೆ ಮಾಸ್ಕ್ ಧರಿಸದವರ ಮೇಲೆ ದಂಡ ವಿಧಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಿದರು.

ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಡಿ.ವೈ.ಎಸ್.ಪಿ ಕಲ್ಲೇಶಪ್ಪ ಓ.ಬಿ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ತಾ.ಪಂ ಇಓ ಮುನಿಯಪ್ಪ.ಪಿ, ಆರಕ್ಷಕ ನಿರೀಕ್ಷಕರಾದ ಶಿಶಧರ ಜಿ.ಎಂ, ಬಸವರಾಜ ಹಳಬಣ್ಣವರ , ಪಿ.ಎಸ್ಐಗಳಾದ ಸಂತೋಷ ಪಾಟೀಲ, ಮಂಜುನಾಥ ಬಿ.ಎನ್, ಎಚ್.ಎಸ್ ಶಿವಣ್ಣವರ ಸೇರಿದಂತೆ ಕಂದಾಯ, ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಮನೆ ಮೇಲ್ಛಾವಣಿ ಕುಸಿದು 18 ತಿಂಗಳ ಅವಳಿ ಮಕ್ಕಳು ಸೇರಿ ಮೂವರು ಸಾವು

Spread the love ಹಾವೇರಿ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ