ರಾಜ್ಯ ಪ್ರಶಸ್ತಿ ವಿಜೇತ ನಟಿ ಮೇಘನಾ ರಾಜ್ ಸರ್ಜಾ ಬಾಳಿಗೆ ಹೊಸ ಬೆಳಕು ಮೂಡಿದೆ.. ತನ್ನ ಮಗನ ನಗುವಿನಲ್ಲಿ ಜೀವನ ಸ್ಫೂರ್ತಿ ಕಾಣುತ್ತಿರೋ ಮೇಘನಾ ರಾಜ್ ತನ್ನ ಎರಡನೇ ಸಿನಿಮಾ ಇನ್ನಿಂಗ್ಸ್ ಪ್ರಾರಂಭಿಸೋ ಸಮಾಚಾರವನ್ನ ನೀಡಿದ್ದಾರೆ.. ಚಿರಂಜೀವಿ ಸರ್ಜಾ ಬರ್ತ್ಡೇ ಪ್ರಯುಕ್ತ ಮೇಘನಾ ಅವರ ಹೊಸ ಮೂವಿ ಲಾಂಚ್ ಆಗಿದೆ..

ತನ್ನ ಮಗನ ನಾಮಕರಣವನ್ನ ಕೆಲ ದಿನಗಳ ಹಿಂದೆ ಗ್ರ್ಯಾಂಡ್ ಆಗಿ ಮಾಡಿದ್ರು ಮೇಘನಾ ರಾಜ್ ಸರ್ಜಾ.. ರಾಯನ್ ರಾಜ್ ಸರ್ಜಾ ನಗುವಿನ ಬೆಳಕಿನಲ್ಲಿ ಮೇಘನಾ ಬಾಳ ಪಯಣ ಸಾಗುತ್ತಿದೆ.. ಏನಾದ್ರೊಂದು ತನ್ನ ಮಗನ ನಗುವಿನ ಅಪ್ಡೇಟ್ ಕೊಡ್ತಿದ್ದ ಮೇಘನಾ ಮತ್ತೆ ಬಣ್ಣ ಹಚೋ ಸಿಹಿ ಸಮಾಚಾರ ಹಬ್ಬದ ಪ್ರಯುಕ್ತ ಕೊಟ್ಟಿದ್ದಾರೆ..
ಕೆಲ ದಿನಗಳ ಹಿಂದೆ ಜಾಹೀರಾತು ಒಂದರಲ್ಲಿ ಮೇಘನಾ ನಟಿಸೋದ್ರ ಮೂಲಕ ಅಭಿನಯ ಲೋಕಕ್ಕೆ ಮತ್ತೆ ಬಲಗಾಲಿಟ್ಟಿದ್ರು.. ಕೆಲವೇ ದಿನಗಳಲ್ಲಿ ಮಲಯಾಳೀ ಸಿನಿಮಾವೊಂದರಲ್ಲಿ ಮೇಘನಾ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಇತ್ತು.. ಈ ಸುದ್ದಿ ಸದ್ದು ಮಾಡೋಷ್ಟರಲ್ಲಿ ಹೊಸ ಕನ್ನಡ ಸಿನಿಮಾಲದಲ್ಲಿ ಮೇಘನಾ ರಾಜ್ ಸರ್ಜಾ ನಟಿಸಲು ಸಜ್ಜಾಗಿದ್ದಾರೆ..
ಹೌದು ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಆರಂಭವಾಗಲಿದೆ ನೂತನ ಚಿತ್ರ.ಮೇಘನಾರಾಜ್ ಪ್ರಧಾನಪಾತ್ರದಲ್ಲಿ ನಟನೆ ಪಿ.ಬಿ ಸ್ಟುಡಿಯೋಸ್ ಲಾಂಛನದಲ್ಲಿ ನೂತನ ಚಿತ್ರ ನಿರ್ಮಾಣವಾಗುತ್ತಿದೆ. ಪನ್ನಗಾಭರಣ ನಿರ್ಮಾಣ ಮತ್ತು ನಿರ್ಮಾಣದ ನಿರ್ವಹಣೆ ಮುಂದಳಾತ್ವ ವಹಿಸಿಕೊಳ್ತಿದ್ದಾರೆ. ಹೊಸ ಪ್ರತಿಭೆ ನಿರ್ದೇಶಕ ವಿಶಾಲ್ ಈ ಚಿತ್ರವನ್ನ ನಿರ್ದೇಶಿಸಲಿದ್ದಾರೆ.. ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ..
ಪನ್ನಗಾಭರಣ ಅವರಿಗೆ ಚಿರಂಜೀವಿ ಸರ್ಜಾ ಅವರೊಂದಿಗೆ ಸೇರಿ ಚಿತ್ರ ನಿರ್ಮಾಣ ಮಾಡಬೇಕೆಂಬ ಹಂಬಲವಿತ್ತು. ಆದ್ರೆ ಆಗಲಿಲ್ಲ. ಈಗ ಈ ನೂತನ ಚಿತ್ರ ಅಕ್ಟೋಬರ್ 17 ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದಂದೇ ಆರಂಭವಾಗುತ್ತಿದೆ.. ಚಿರು ಸರ್ಜಾ ಬರ್ತ್ಡೇ ದಿನ ಸಿನಿಮಾ ಹೆಸರೇನು ಈ ಸಿನಿಮಾ ವೈಶಿಷ್ಠತೆ ಏನು ಅನ್ನೋ ಸಮಾಚಾರ ಅಧಿಕೃತವಾಗಿ ಹೊರಬರಲಿದೆ.
Laxmi News 24×7