ಘಟಪ್ರಭಾ: ಇಲ್ಲಿನ ಪ್ರತಿಶ್ಠಿತ ಕೆಎಚ್ ಐ ಆಸ್ಪತ್ರೆಯಲ್ಲಿನ ಡಾ. ಎನ್.ಎಸ್. ಹರಡಿಕರ್ ಕಾಂಗ್ರೆಸ್ ಸೇವಾದಳ ಅಕಾಡೆಮಿಗೆ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳ ಮಾಜಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸೌಜನ್ಯ ಭೇಟಿ ನೀಡಿದರು.
ಎನ್.ಎಸ್. ಹರಡಿಕರ ನಿವಾಸಕ್ಕೆ ಭೇಟಿ ನೀಡಿದ ಉಭಯ ನಾಯಕರು ಕೆಎಚ್ಐ ಆಸ್ಪತ್ರೆಯ ಸಿಎಂಒ ಡಾ. ಘನಶ್ಯಾಮ ವೈದ್ಯ, ಕರ್ನಾಟಕ ಕಾಂಗ್ರೆಸ್ ಸೇವಾದಳ ಆರ್ಗನೈಜರ್ ಬಿ.ಎನ್.ಶಿಂಧೆ ಜೊತೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು