Breaking News

ಡ್ರಗ್ಸ್​ ಜಾಲದಲ್ಲಿ ಪ್ರಭಾವಿ ರಾಜಕಾರಣಿ ಪುತ್ರ, ನಟನ ಮೈದುನ

Spread the love

ಬೆಂಗಳೂರು: ಡ್ರಗ್ಸ್​ ಜಾಲ ಬಗೆದಷ್ಟೂ ಆಳವಾಗುತ್ತಿದೆ. ಸ್ಯಾಂಡಲ್​ವುಡ್​ ನಟಿ ರಾಗಿಣಿ ಈಗಾಗಲೇ ಅರೆಸ್ಟ್​ ಆಗಿದ್ದಾರೆ. ಹಾಗೇ ಸಿಸಿಬಿ A-1, A-2 ಎಂದು ಆರೋಪಿಗಳ ಪಟ್ಟಿಯನ್ನು ಮಾಡಿದ್ದು, ಅದರಲ್ಲಿ A 6(ಆರೋಪಿ-6) ಆದಿತ್ಯ ಆಳ್ವ.

ಡ್ರಗ್ಸ್​ ಜಾಲದಲ್ಲಿ ಪ್ರಭಾವಿ ರಾಜಕಾರಣಿಗಳ ಮಕ್ಕಳೂ ಸೇರಿದ್ದಾರೆ ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಿತ್ತು. ಅದಕ್ಕೀಗ ಸಾಕ್ಷಿಯೆಂಬಂತೆ ಆದಿತ್ಯ ಆಳ್ವ ಹೆಸರು ಕೇಳಿಬಂದಿದೆ. ಈ ಆದಿತ್ಯ ಆಳ್ವ, ಮಾಜಿ ಸಚಿವ, ದಿವಂಗತ ಜೀವರಾಜ್​ ಆಳ್ವ-ನಂದಿನಿ ಆಳ್ವ ಅವರ ಪುತ್ರ. ಹಾಗೇ ಬಾಲಿವುಡ್​ ನಟ ವಿವೇಕ್​ ಓಬೆರಾಯ್​ ಅವರ ಪತ್ನಿಯ ತಮ್ಮ. ಅಂದ್ರೆ ಮೈದುನ.

ಈತನ ಸ್ನೇಹಿತರೂ ಡ್ರಗ್ಸ್​ ಸಪ್ಲೈ, ಸೇವನೆಯಲ್ಲಿ ಪಾಲುದಾರರಾಗಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ. ಎಫ್​ಐಆರ್​ನಲ್ಲಿ ಸದ್ಯ ಆದಿತ್ಯ ಹೆಸರು ಉಲ್ಲೇಖವಾಗಿದೆ.ಆದಿತ್ಯ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು ಸಿಸಿಬಿ ಮುಂದಾಗಿದೆ.


Spread the love

About Laxminews 24x7

Check Also

ಬೆಳಗಾವಿ: ೧೬-೩-೨೪ ಲಿಂಗಾಯತ ಸ೦ಘಟನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಬೆಳಗಾವಿ ಶರಣರ ಕಾಯಕ ದಾಸೋಹ ಸಂಸ್ಕೃತಿ ಲೋಕಕ್ಕೆ ಮಾದರಿ- ಸಾಹಿತಿ,ಬಸವರಾಜ ಕುಪ್ಪಸ ಗೌಡ್ರ

Spread the loveಬೆಳಗಾವಿ: ೧೬-೩-೨೪ ಲಿಂಗಾಯತ ಸ೦ಘಟನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಬೆಳಗಾವಿ ಶರಣರ ಕಾಯಕ ದಾಸೋಹ ಸಂಸ್ಕೃತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ