Breaking News

ಕೊರೋನಾ ವೈರಸ್ ಬೆಳಗಾವಿ ಜಿಲ್ಲೆಗೆ ಬಿಡದೇ ಕಾಡುತ್ತಿದೆ.

Spread the love

ಬೆಳಗಾವಿ: ನಗರದಲ್ಲಿ ಕೊರೊನಾ ಸೋಂಕಿಗೆ 74 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಆ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದೆ.

ಗುಡ್ ಶೆಡ್ ರಸ್ತೆ ನಿವಾಸಿಯಾಗಿರುವ 74 ವರ್ಷದ ವ್ಯೆಕ್ತಿಗೆ ನಿನ್ನೆ ಮಧ್ಯಾಹ್ನ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸ್ಸು ಮಾಡಿದ್ದರು,, ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ‌‌. ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಜಿಲ್ಲೆಯಲ್ಲಿ ಇಂದು 11 ಮತ್ತು 12 ವರ್ಷದ ಯುವಕ ಸೇರಿ 8 ಮಂದಿಗೆ ಪಾಸಿಟಿವ್ ಬರದಿ ಬಂದಿದೆ. ಸೋಂಕಿತರ ಸಂಖ್ಯೆ 336 ಕ್ಕೆ ಏರಿಕೆಯಾಗಿದೆ.‌

ಜಿಲ್ಲೆಯ 336 ಸೋಂಕಿತರ ಪೈಕಿ ಈವರೆಗೆ 303 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 30 ಸಕ್ರಿಯ ಪ್ರಕರಣಗಳಿವೆ.


Spread the love

About Laxminews 24x7

Check Also

ಕಣ್ಣಿನ ಚಿಕಿತ್ಸೆಗೆ ಮಾಧುರಿ ಜಾಧವ್ ಫೌಂಡೇಶನ್ ಮೂಲಕ ಚೆಕ್ ಹಸ್ತಾಂತರ

Spread the loveಬೆಳಗಾವಿ: ಪಟಾಕಿ ಸ್ಫೋಟದಲ್ಲಿ ಕಣ್ಣು ಕಳೆದುಕೊಂಡ ಶಹಾಪುರದ ಶಿವ ಲೋಹರ್ ಅವರ ಚಿಕಿತ್ಸೆಗೆ ಸಹಾಯದ ಮಹಾಪೂರ ಹರಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ