ಮಂಡ್ಯ ಜಿಲ್ಲೆ ಪಾಂಡವಪುರ: ಮಹಾಮಾರಿ ಕರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಇಲ್ಲಿನ ಪುರಸಭೆ ಅಧಿಕಾರಿಗಳು ಬುಧವಾರ ಕರೊನಾ ಶವಯಾತ್ರೆ ನಡೆಸಿ ಸಾರ್ವಜನಿಕ ರಲ್ಲಿನ ಭಯ ಹೋಗಲಾಡಿಸುವ ಪ್ರಯತ್ನ ನಡೆಸಿದರು.
ಪುರಸಭೆ ಕಚೇರಿ ಆವರಣದಿಂದ ಬೆಳಿಗ್ಗೆ 12 ಗಂಟೆಗೆ ಪ್ರಾರಂಭವಾದ ಶವಯಾತ್ರೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿತು.
ಕರೊನಾ ಸೋಂಕು ತಡೆಗಟ್ಟಲು ಯಾರೂ ಮನೆಯಿಂದ ಹೊರಗೆ ಬರಬಾರದು. ಬಂದರೆ ಸೋಂಕು ತಗಲುವ ಸಾಧ್ಯತೆ ಗಳಿವೆ ಸಾರ್ವಜನಿಕ ರು ತಾಲ್ಲೂಕು ಆಡಳಿತದ ಜತೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಸಾರ್ವಜನಿಕ ರಲ್ಲಿ ಮನವಿ ಮಾಡಿದರು.
ಕರೊನಾ ವೈರಸ್ ಮಾದರಿ ಯನ್ನು ಚಟ್ಟದಲ್ಲಿ ಕುಳ್ಳಿರಿಸಿ ತಮಟೆ ಬಾರಿಸುತ್ತಾ ಥೇಟ್ ನಿಜವಾದ ಶವಯಾತ್ರೆಯಂತೆಯೇ ಕಾರ್ಯಕ್ರಮ ನಡೆಯಿತು.
ಕಂದಾಯ ಅಧಿಕಾರಿ ಪಳನಿ ಕರೊನಾ ಶವದ ಮುಂದೆ ಬೆಂಕಿ ಹಿಡಿದು ಸಾಗಿದ್ದು ಸಾರ್ವಜನಿಕ ರ ಗಮನ ಸೆಳೆಯಿತು.
ಇಂಜಿನಿಯರ್ ಚೌಡಪ್ಪ ಆರೋಗ್ಯ ನಿರೀಕ್ಷಿಕ ಕಾಳಪ್ಪ, ಬಸವರಾಜು, ರಮೇಶ, ಚಿಂತಾಮಣಿ ಮುಂತಾದವರು ಇದ್ದರು.