Breaking News

ಬಡ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿದ ಸುದೀಪ್: ಶಿಕ್ಷಣಕ್ಕೆ ನೆರವು

Spread the love

ನಟ ಕಿಚ್ಚ ಸುದೀಪ್ ತಮ್ಮ ನಟನೆಯ ಜೊತೆ-ಜೊತೆಗೆ ಸಾಮಾಜಿಕ ಕಾರ್ಯಗಳಿಂದಲೂ ಖ್ಯಾತರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಲೇ ಇರುತ್ತಾರೆ. ಇದೀಗ ಬಡ ಹೆಣ್ಣು ಮಗುವೊಂದಕ್ಕೆ ಓದಿಗೆ ಸಹಾಯ ಒದಗಿಸಿದ್ದಾರೆ ಕಿಚ್ಚ ಸುದೀಪ್.
ಬೆಂಗೂರಿನ ನಾಗದೇವನಹಳ್ಳಿಯ ನಿವಾಸಿ ಆರನೇ ತರಗತಿ ಓದುತ್ತಿರುವ ಕನಿಶಾ ಗೆ ಶಾಲೆಯ ಫೀಸು ತುಂಬಲು ಕಷ್ಟವಾಗಿತ್ತು.

ಅಪ್ಪನಿಲ್ಲದೆ ತಾಯಿಯ ಆರೈಕೆಯಿಂದ ಬೆಳೆಯುತ್ತಿರುವ ಕನಿಶಾ ಸಂದೀಪಿನ ಶಾಲೆಯಲ್ಲಿ ಕಲಿಯುತ್ತಿದ್ದರು.ಆದರೆ ಲಾಕ್‌ಡೌನ್‌ನಿಂದಾಗಿ ತಾಯಿಗೆ ಸೂಕ್ತ ಸಮಯದಲ್ಲಿ ಹಣ ದೊರಕದೆ ಶಾಲೆಯ ಫೀಸು ಕಟ್ಟುವುದು ಕಷ್ಟವಾಗಿತ್ತು.
ಆಗ ಕನಿಶಾ ತಾಯಿ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೊರೆ ಹೋದರು. ಕೂಡಲೇ ಸ್ಪಂದಿಸಿದ ಸುದೀಪ್ ಮತ್ತು ಟ್ರಸ್ಟ್ ಮಗುವಿನ ಫೀಸು ತುಂಬಲು ಹಣ ನೀಡಿತು.

ಸಂದೀಪಿನ ಶಾಲೆಯು ಇಂದು ನೀಡಿರುವ ಪತ್ರ ಹೇಳಿಕೆ ಪ್ರಕಾರ ಚೆಕ್‌ ಮೂಲಕ ಕನಿಶಾ ಅವರ 29,950 ರೂ ಫೀಸನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ನೀಡಿದೆ. ಈ ಫೀಸು 2020-21 ಶೈಕ್ಷಣಿಕ ಸಾಲಿಗೆಂದು ನೀಡಲಾಗಿದೆಯಂತೆ


Spread the love

About Laxminews 24x7

Check Also

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್..

Spread the love ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್.. ರಾಣಾ-ಪ್ರಿಯಾಂಕಾ ಜೋಡಿಯ ಏಳುಮಲೆ ಸಿನಿಮಾದ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ