ಲಂಡನ್: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಚೀನಾದ ಮುಖ ಮತ್ತೊಮ್ಮೆ ಬಯಲಾಗಿದ್ದು ವುಹಾನ್‌ನಿಂದ ಕೋವಿಡ್ 19 ಕುರಿತಂತೆ ಏಕಾಏಕಿ ವರದಿ ಮಾಡಿದ್ದಕ್ಕಾಗಿ ಚೀನಾದ ಪತ್ರಕರ್ತೆ ಐದು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಿದೆ.
ಸುಳ್ಳು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಮಾಜಿ ವಕೀಲೆ, ಪತ್ರಕರ್ತೆ ಜಾಂಗ್ ಝಾನ್ ಅವರನ್ನು ಕಳೆದ 6 ತಿಂಗಳಿನಿಂದ ಶಾಂಫೈ ಬಂಧಿಖಾನೆಯಲ್ಲಿ ಇರಿಸಲಾಗಿದ್ದು ಇದೀಗ ಆಕೆಗೆ 5 ವರ್ಷ ಜೈಲು ಶಿಕ್ಷೆಯನ್ನು ಎದುರಿಸಬೇಕಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಜಾಂಗ್ ವಿರುದ್ಧ ತೊಂದರೆಗಳನ್ನು ಹುಟ್ಟುಹಾಕಿದರು ಎಂದು ಆರೋಪಿಸಲಾಗಿದೆ. ಸರ್ಕಾರದ ವಿರುದ್ಧ ದನಿ ಎತ್ತುವ ವಿಮರ್ಶಕರು ಮತ್ತು ಕಾರ್ಯಕರ್ತರ ವಿರುದ್ಧ ಚೀನಾ ಆಗಾಗ್ಗೆ ಈ ಆರೋಪಗಳನ್ನು ಮಾಡುತ್ತದೆ.
ಜಾಂಗ್ ಅವರು ವಿದೇಶಿ ಮಾಧ್ಯಮ, ಫ್ರೀ ರೇಡಿಯೋ ಏಷ್ಯಾ ಮತ್ತು ಎಪೋಚ್ ಟೈಮ್ಸ್ ಗೆ ಸಂದರ್ಶನಗಳು ನೀಡಿದ್ದು ಈ ವೇಳೆ ವುಹಾನ್ ಕೋವಿಡ್ 19 ಸಾಂಕ್ರಾಮಿಕ ರೋಗದ ಬಗ್ಗೆ ದುರುದ್ದೇಶದಿಂದ ಮಾಹಿತಿಗಳನ್ನು ಕಳುಹಿಸಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.
Laxmi News 24×7