ಚಿಕ್ಕೋಡಿ:೧೫ ಲಕ್ಷ ರೂ ಹಾನಿ.
ಸಮರ್ಪಕ ಮಾರಾಟವಾಗದೇ ರೈತನ ಕಣ್ಣಲ್ಲಿ ನೀರು ತರಿಸಿದ ಡೊಣ್ಣ ಮೆಣಸಿನಕಾಯಿ ತರಕಾರಿ ಬೆಳೆ
ಒಂದು ಕಡೆ ಕೊರೊನಾ ಭೀತಿ ಮತ್ತೊಂದು ಕಡೆ ನೆತ್ತಿ ಸುಡುವ ಬೀರು ಬಿಸಲಿನ ಬೇಗೆ ಇಂತಹ ಸಂದೀಗ್ಧ ಪರಿಸ್ಥಿತಿಯಲ್ಲಿ ಜಮೀನಿನಲ್ಲಿ ಹುಲಸಾಗಿ ಬೆಳೆದ ಡೊಣ್ಣೆ ಮೆಣಸಿನಕಾಯಿ ಸಮರ್ಪಕ ಮಾರಾಟವಾಗದೇ ರೈತನ ಕಣ್ಣಲ್ಲಿ ಕಣ್ಣಿರು ತರಿಸುತ್ತಿದೆ.
ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ವ್ಯಾಪ್ತಿಯ ಡೋಣವಾಡ ಗ್ರಾಮದ ಸಿದ್ದಗೌಡ ಪಾಟೀಲ ಎಂಬ ರೈತ ತನ್ನ ೩ ಎಕರೆ ಜಮೀನಿನಲ್ಲಿ ಕೇವಲ ಎರಡೂ ತಿಂಗಳ ಅವಧಿಯಲ್ಲಿ ಅಂದಾಜು ೪ ಲಕ್ಷ ರೂ ಖರ್ಚು ಮಾಡಿ ಡೊಣ್ಣೆ ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದರು. ಈಗ ಬೆಳೆ ರೈತನ ಕೈಸೆರುತ್ತಿದೆ. ಆದರೆ ಲಾಕಡೌನ್ ಇರುವುದರಿಂದ ನೆರೆಯ ಮಹಾರಾಷ್ಟ್ರದ ಕೊಲ್ಲಾಪೂರ, ಪುಣೆ, ಸಾಂಗ್ಲೀ, ಗೋವಾ ಮತ್ತು ಬೆಳಗಾವಿ ನಗರದ ದೊಡ್ಡ ದೊಡ್ಡ ಹೊಟೇಲ್‌ಗಳು ಮುಚ್ಚಿವೆ. ಸರಬರಾಜು ಆಗದೇ ಇದ್ದ ಕಾರಣ ರೈತನ ಡೊಣ್ಣೆ ಮೆಣಸಿನಕಾಯಿ ಗಿಡದಲ್ಲಿ ಹಣ್ಣಾಗಿ ಕೊಳೆಯುವ ಸ್ಥಿತಿ ತಲುಪಿವೆ ಎಂದು ರೈತ ಅಳಲು ತೋಡಿಕೊಂಡನು.
ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ತೊಂದರೆ ಅನುಭವಿಸುವ ಡೋಣವಾಡ ಗ್ರಾಮದ ರೈತರು ಈ ವರ್ಷ ಅಲ್ಪಸ್ವಲ್ಪ ನೀರಿನ ಮೂಲ ಬಳಕೆ ಮಾಡಿಕೊಂಡು ಡೊಣ್ಣೆ ಮೆಣಸಿನಕಾಯಿ ತರಕಾರಿ ನಾಟಿ ಮಾಡಿದ್ದರು. ರೈತನ ಶ್ರಮ ಸಾರ್ಥಕವಾಗಿದ್ದರೇ ಅಂದಾಜು ೧೫ ಲಕ್ಷ ರೂವರಿಗೆ ಲಾಭಾಂಶ ಸಿಗುತ್ತಿತ್ತು. ಆದರೆ ತಾನೊಂದು ಬಗೆದರೇ ದೈವವೊಂದು ಬಗೆಯುತ್ತಿದೆ ಎನ್ನುವ ಗಾದೆ ಇಂದು ರೈತನಿಗೆ ಅನ್ವಯವಾಗಿದೆ. ಕೇವಲ ಎರಡೂ ತಿಂಗಳ ಅವಧಿಯಲ್ಲಿ ನಾಲ್ಕು ಲಕ್ಷ ರೂ ಖರ್ಚು ಮಾಡಿದ ಬೆಳೆ ಇಂದು ಕಣ್ಣು ಮುಂದೆ ನಾಶವಾಗುತ್ತಿರುವುದು ರೈತನಿಗೆ ನುಂಗಲಾರದ ತುತ್ತಾಗಿದೆ.
ರೈತನು ಬೆಳೆದ ತರಕಾರಿ, ಹಣ್ಣು ಹಂಪಲ ಮಾರಾಟ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೇ ಗ್ರಾಹಕರು ಅಲ್ಪಸ್ವಲ್ಪ ಖರೀದಿ ಮಾಡುತ್ತಾರೆ. ಇದರಿಂದ ರೈತರಿಗೆ ಸಾಲದು, ಗೊಡ್ಸಗಾಡಿಗಳ ದರ ಸಹ ದುಭಾರಿಯಾಗಿವೇ ಅದೇ ಹೊಟೇಲ ಉದ್ಯಮಗಳು ಪ್ರಾರಂಭವಿದ್ದರೇ ಇಂದು ರೈತ ಕೈತುಂಭ ದುಡ್ಡು ಎಣಿಸುತ್ತಿದ್ದ, ಆದರೆ ಕೊರೊನಾ ವೈರಸ್ ಬಂದು ರೈತನ ಬೆಣ್ಣೆಲಬು ಮುರಿದಿದೆ.
ಇದೇ ರೀತಿ ಲಾಕಡೌನ್ ಮುಂದುವರೆದರೇ ರೈತರು ಬೀದಿಗೆ ಬರುತ್ತಾರೆ ಎಂದು ಡೊಣ್ಣೆ ಮೆಣಸಿನಕಾಯಿ ಬೆಳೆದ ರೈತ ಪಾಟೀಲ ನೋವಿನಿಂದ ಹೇಳಿದ.
ಪರಿಹಾರ ನೀಡಲು ಒತ್ತಾಯ
ಕೇವಲ ಎರಡು ತಿಂಗಳ ಅವಧಿಯಲ್ಲಿ ನಾಲ್ಕು ಲಕ್ಷ ರೂ ಖರ್ಚು ಮಾಡಿ ಡೊಣ್ಣು ಮೆಣಸಿನಕಾಯಿ ಬೆಳೆ ನಾಟಿ ಮಾಡಲಾಗಿದೆ. ಈಗ ಲಾಕಡೌನ್ ಇರುವುದರಿಂದ ಡೊಣ್ಣು ಮೆಣಸಿನಕಾಯಿ ಬೆಳೆ ನಾಶವಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಡೊಣ್ಣು ಮೆಣಸಿನಕಾಯಿ ಬೆಳೆ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಪ್ರಯತ್ನ ಮಾಡಬೇಕು.
ಎಂದು ನೊಂದ ರೈತ ಡೋಣವಾಡ ಗ್ರಾಮದ ಸಿದ್ದಗೌಡ ಪಾಟೀಲ ಅಳಲು ತೋಡಿಕೊಂಡರು.