ಚಾಮರಾಜನಗರ: ಪೊಲೀಸರ ಜೀಪು ಕಂಡು ಹೆದರಿ ಓಡಿದ ಯುವಕ ಜಮೀನೊಂದರಲ್ಲಿ ಎಡವಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಚಾಮರಾಜನಗರ ತಾಲ್ಲೂಕಿನ ಯಾಲಕ್ಕೂರು ಗ್ರಾಮದಲ್ಲಿ ನಡೆದಿದೆ. ಶಂಕರ್(22) ಮೃತ ಯುವಕ.
ಕೊರೊನಾ ಲಾಕ್ಡೌನ್ ಕಾರಣದಿಂದ ಯಾರೂ ಗುಂಪುಗೂಡದಂತೆ ನಿನ್ನೆ ನಿಷೇಧಾಜ್ಞೆ ಹೇರಲಾಗಿತ್ತು. ಈ ಹಿನ್ನೆಲೆ ನಿನ್ನೆ ಸಂಜೆ ಕುದೇರು ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ಯುವಕರ ಗುಂಪೊಂದು ಗ್ರಾಮದ ಪಡಸಾಲೆ ಮೇಲೆ ಗುಂಪಾಗಿ ಕುಳಿತಿದ್ದು, ಪೊಲೀಸ್ ಜೀಪ್ ಕಂಡೊಡನೆ ಗುಂಪಿನಲ್ಲಿದ್ದ ಯುವಕ ಶಂಕರ್ ದಿಕ್ಕಾಪಾಲಾಗಿ ಓಡಿದ್ದಾನೆ. ಈ ವೇಳೆ ಜಮೀನೊಂದರಲ್ಲಿ ಎಡವಿ ಬಿದ್ದ ಆತ ಪ್ರಜ್ಞೆ ಕಳೆದುಕೊಂಡಿದ್ದ.
ಬಳಿಕ ಗ್ರಾಮಸ್ಧರು ಚಿಕಿತ್ಸೆಗಾಗಿ ಆತನನ್ನು ಸಂತೇಮರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡುವಂತೆ ಸೂಚಿಸಿದ್ದರು
ಅದರಂತೆ ಗ್ರಾಮಸ್ಥರು ಶಂಕರ್ನನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಜಿಲ್ಲಾಸ್ಪತ್ರಾ ವೈದ್ಯರು ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ನಂತರ ಶವವನ್ನು ಆಯಂಬುಲೆನ್ಸ್ ಮೂಲಕ ಗ್ರಾಮಕ್ಕೆ ತಂದಿದ್ದಾರೆ.
Laxmi News 24×7