ಬೆಂಗಳೂರು: ಶಾಲೆಗಳಿಗೆ ನೀಡಿದ್ದ ಮಧ್ಯಾಂತರ ರಜೆ ಮುಗಿದಿದ್ದು, ಕನ್ನಡ ರಾಜ್ಯೋತ್ಸವ ಆಚರಣೆಗೆ ನ.1ರಂದು ಎಲ್ಲ ಶಿಕ್ಷಕರು ಹಾಜರಾಗಬೇಕು, 2ರಿಂದ ಶಿಕ್ಷಕರು ಶಾಲೆಗೆ ಬರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಶಾಲಾರಂಭಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಅಥವಾ ಸರಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ವಿದ್ಯಾಗಮವೂ ತಾತ್ಕಾಲಿಕವಾಗಿ ರದ್ದಾಗಿದೆ. ಹೀಗಾಗಿ ಶಿಕ್ಷಕರು ಶಾಲೆಗೆ ಬಂದು ಯಾವ ಕಾರ್ಯ ಮಾಡಬೇಕು ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.
ವಿದ್ಯಾಗಮ ಚಟುವಟಿಕೆಯಲ್ಲಿ ಈವರೆಗೆ ಭಾಗಿಯಾಗಿರುವ ವಿದ್ಯಾರ್ಥಿಗಳ ಕಲಿಕಾ ಸಾಧನೆ ಏನು ಮತ್ತು ಕಲಿಕೆಯಲ್ಲಿನ ಕೊರತೆ ಏನು ಎಂಬುದನ್ನು ಪಟ್ಟಿ ಮಾಡಬೇಕು. ಶಾಲಾರಂಭದ ಬಳಿಕ ಕಲಿಕಾ ಕೊರತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲು ಸಾಧ್ಯವಾಗುತ್ತದೆ.
Laxmi News 24×7