Breaking News

ಯೋಧನ ಕೇಸರಿ ಮಾಸ್ಕ್ ಬದಲಿಸಲು ಅನುಕೂಲ : ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

Spread the love

ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಇಂದು ನಡೆಯುತ್ತಿರುವಂತ ಮತದಾನದ ವೇಳೆ, ಮತಗಟ್ಟೆಯ ಕೇಂದ್ರದಲ್ಲಿ ಅರೆ ಸೇನಾಪಡೆಯ ಯೋಧರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಹೀಗೆ ನಿಯೋಜನೆಗೊಂಡಿದ್ದಂತ ಯೋಧರೊಬ್ಬರು ಕೇಸರಿ ಬಣ್ಣದ ಮಾಸ್ಕ್ ಧರಿಸಿದ್ದರು. ಇದನ್ನು ಮತ ಚಲಾವಣೆಗೆ ತೆರಳುವ ವೇಳೆ ಗಮನಿಸಿದಂತ ಯುವಕನೋರ್ವ ತರಾಟೆಗೆ ತೆಗೆದುಕೊಂಡನು.

ತಾವು ಕೇಸರಿ ಮಾಸ್ಕ್ ಧರಿಸಿದ್ದೀರಿ. ದಯವಿಟ್ಟು ಕೇಸರಿ ಮಾಸ್ಕ್ ಬದಲಾಯಿಸಿ, ಬೇರೆಯ ಮಾಸ್ಕ್ ಧರಿಸುವಂತೆ ಸೂಚಿಸಿದರು. ಆದ್ರೇ ಅರೆ ಸೇನಾಪಡೆಯ ಯೋಧನಿಗೆ ಯುವಕ ಕನ್ನಡದಲ್ಲಿ ಹೇಳಿದ ಮನವಿಯ ಮಾತು ಅರ್ಥವಾಗಲಿಲ್ಲ. ಕೊನೆಗೆ ಪಕ್ಕದಲ್ಲಿದ್ದಂತ ಮತ್ತೋರ್ವ ಯೋಧ, ಅದನ್ನು ಬಿಡಿಸಿ ಹೇಳಿದರು. ಯುವಕನೇ ಸರ್ಜಿಕಲ್ ಮಾಸ್ಕ್ ನೀಡಿ, ಯೋಧನ ಕೇಸರಿ ಮಾಸ್ಕ್ ಬದಲಿಸಲು ಅನುಕೂಲ ಮಾಡಿಕೊಟ್ಟನು. ಇಂತಹ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.


Spread the love

About Laxminews 24x7

Check Also

ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ಬೇಡ, ಬುಡ್ಗ ಜಂಗಮರಲ್ಲ: ಹೈಕೋರ್ಟ್​ ಸ್ಪಷ್ಟನೆ

Spread the love ಬೆಂಗಳೂರು: ವೀರಶೈವ ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ ಅಥವಾ ‘ಬುಡ್ಗ’ ಜಂಗಮರಲ್ಲ. ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ