Breaking News

ರವಿಶಂಕರ್​​ನನ್ನು ಸಿಸಿಬಿ ಪೊಲೀಸರು ಬಂಧಿಸಿ ಮೊಬೈಲ್ ರಿಟ್ರೈವ್​ ಮಾಡಿದಾಗ ಡ್ರಗ್ಸ್ ಜತೆ ಆತ ಹವಾಲಾ ದಂಧೆ

Spread the love

ಬೆಂಗಳೂರು : ಸ್ಯಾಂಡಲ್​​​​​ವುಡ್​ಗೆ ಡ್ರಗ್ಸ್​ ಜಾಲ ನಂಟು ಆರೋಪ ಪ್ರಕರಣ ಸಂಬಂಧ ಸದ್ಯ ಬಂಧನವಾಗಿರೋ ಆರೋಪಿಗಳು ಕೇವಲ ಡ್ರಗ್ಸ್​ ಪೆಡ್ಲಿಂಗ್ ಮತ್ತು ಸೇವನೆ‌ ಅಷ್ಟೇ ಮಾಡುತ್ತಿರಲಿಲ್ಲ. ಇವರ ಜಾಲ ಕಂಡು ಸಿಸಿಬಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಆರೋಪಿ ರವಿಶಂಕರ್​​ನನ್ನು ಸಿಸಿಬಿ ಪೊಲೀಸರು ಬಂಧಿಸಿ ಮೊಬೈಲ್ ರಿಟ್ರೈವ್​ ಮಾಡಿದಾಗ ಡ್ರಗ್ಸ್ ಜತೆ ಆತ ಹವಾಲಾ ದಂಧೆಯಲ್ಲೂ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. 5, 10 ರೂಪಾಯಿ ನೋಟುಗಳನ್ನು ಹವಾಲಾಗೆ ಬಳಸಿ, ಲಕ್ಷಕ್ಕೆ ಕೆ.ಜಿ ಅಂತ ಕೋಡ್ ವರ್ಡ್ ಬಳಸಿ ಶ್ರೀಲಂಕಾದಲ್ಲಿ ಲಕ್ಷ‌ ಲಕ್ಷ ಹಣ ಹೂಡಿಕೆ ‌ಮಾಡಿದ್ದಾನೆ. ಇನ್ನು ನೋಟಿನ ಫೋಟೋ ಮತ್ತು ನಂಬರ್​ಗಳನ್ನು ಶ್ರೀಲಂಕಾಗೆ ವಾಟ್ಸಾಪ್​​ ಮೂಲಕ ಕಳುಹಿಸಿರುವುದು ತಿಳಿದುಬಂದಿದೆ.

ಶ್ರೀಲಂಕಾದ ಕ್ಯಾಸಿನೋದಲ್ಲಿ ಹಲವಾರು ಮಂದಿ ಭಾಗಿಯಾಗಿ ಡ್ರಗ್ ಪಾರ್ಟಿ ಮಾಡುತ್ತಿದ್ದರು.

ಪಾರ್ಟಿಗೆ ಬರುವವರು ಹಣ ನೀಡಬೇಕು. ಹೀಗಾಗಿ ಯಾರಿಗೂ ಅನುಮಾನ ಬಾರದ ರೀತಿ 5, 10, 20 ರೂಪಾಯಿ ನೋಟಿನ ಮುಖಾಂತರ ಹವಾಲ ದಂಧೆ ಮಾಡಿರುವ ವಿಚಾರ ಬಯಲಾಗಿದೆ.

ಸದ್ಯ ಆರೋಪಿ ಕಳುಹಿಸಿರುವ ನೋಟಿನ ಚಿತ್ರಗಳ ಫೋಟೋಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. 5 ಅಂದರೆ 5ಲಕ್ಷ, 10 ಅಂದರೆ 10ಲಕ್ಷ, 20 ಅಂದರೆ 20 ಲಕ್ಷ ಎಂಬ ಕೋಡ್​​​​​ವರ್ಡ್​ ಇಟ್ಟುಕೊಂಡಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಈ ಕುರಿತು ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಹಾಗೆಯೇ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ರವಾನಿಸಿದ್ದಾರೆ.

ಹಾಗೆ ಬ್ಯಾಂಕಾಂಕ್​​​ ಅಂಡರ್ ವರ್ಲ್ಡ್ ಡಾನ್ ಸಂತೋಷ್ ಶೆಟ್ಟಿ ಜೊತೆಗೆ ಸಂಜನಾ ಆಪ್ತ ರಾಹುಲ್ ಲಿಂಕ್ ಹೊಂದಿರುವ ಫೋಟೋ ಕೂಡ ಲಭ್ಯವಾಗಿದೆ. ರಾಹುಲ್, ಡಾನ್ ಸಂತೋಷ್ ಶೆಟ್ಟಿ ಫೋಟೋ ಕೂಡ ರವಿಶಂಕರ್ ವಾಟ್ಸಾಪ್​​​ ಗ್ರೂಪ್​​​​ನಲ್ಲಿ ಚರ್ಚೆಯಾಗಿದ್ದು, ವಾಟ್ಸಾಪ್​​​ ಸಂದೇಶದ ಆಧಾರದ ಮೇರೆಗೆ ತನಿಖೆ ‌ನಡೆಸಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ‌.


Spread the love

About Laxminews 24x7

Check Also

ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಚೆನ್ನಮ್ಮ, ರಾಯಣ್ಣಿಗೆ ಗೌರವ

Spread the loveಬೆಂಗಳೂರು, (ಜುಲೈ 15): ಸ್ವಾತಂತ್ರ್ಯೋತ್ಸವ (Independence Day) ಮತ್ತು ಗಣರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ಒಂದೊಂದು ರೀತಿಯ ವಿಷಯವಸ್ತುವಿನ ಆಧಾರದಲ್ಲಿ ತೋಟಗಾರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ