ಬೆಳಗಾವಿ :ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಗೆ ಸೇರಿದ 110 ಆಸ್ತಿಗಳು,16 ಜನರ ಹೆಸರಿನಲ್ಲಿದ್ದು,ಈ ಆಸ್ತಿಗಳ ಹರಾಜಿಗೆ ಅನುಮತಿ ಕೋರಿ,ಬೆಳಗಾವಿ ಉಪವಿಭಾಗಾಧಿಕಾರಿಗಳು ಕೋರ್ಟ್ ಮೊರೆಹೋಗಿದ್ದಾರೆ.
ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತು,ಪ್ರಕರಣ ದಾಖಲಾಗಿದ್ದು,ಸೊಸೈಟಿ ಆಸ್ತಿ ಹೊಂದಿದದವರ 16 ಜನರಿಗೆ ನೋಟೀಸ್ ಜಾರಿಯಾಗಿದೆ.
ಸೊಸೈಟಿಯ ಒಟ್ಟು110 ಆಸ್ತಿಗಳು ಹದಿನಾರು ಜನರ ಹೆಸರಿನಲ್ಲಿವೆ, ಕೋಟ್ಯಾಂತರ ರೂ ಬೆಲೆಬಾಳುವ ಈ ಆಸ್ತಿಗಳ ಉತಾರದಲ್ಲಿ ಈಗಾಗಲೇ ಸರ್ಕಾರದ ಆಸ್ತಿ ಎಂದು ನಮೂದಿಸಲಾಗಿದೆ.ನ್ಯಾಯಾಲಯದ ಅನುಮತಿ ಪಡೆದು,ಕ್ರಮಬದ್ಧವಾಗಿ ಈ ಆಸ್ತಿಗಳನ್ನು ಹರಾಜು ಮಾಡಲು ಬೆಳಗಾವಿ ಉಪವಿಭಾಗಾಧಿಕಾರಿಗಳು ಈಗ ಕೋರ್ಟ್ ಮೊರೆ ಹೋಗಿದ್ದಾರೆ.
ನ್ಯಾಯಾಲಯದ ಆದೇಶ ಬಂದ ಬಳಿಕ, ಒಟ್ಟು 110 ಆಸ್ತಿಗಳು ಹರಾಜಿನ ಮೂಲಕ ಮಾರಾಟವಾದ ಬಳಿಕ,ಠೇವಣಿದಾರರಿಗೆ ಹಣ ಸಿಗುವ ಸಾದ್ಯತೆ ಇದೆ.