Breaking News

ಕಂದಾಯ ಸಚಿವ R.ಅಶೋಕ್‌ 25 ಸಾವಿರ ರೂ. ಪರಿಹಾರದ ಚೆಕ್​ ವಿತರಣೆ :ಪರಿಹಾರ ಹಣ ಪಡೆದವರಿಗೆ ಬಿಬಿಎಂಪಿ ಶಾಕ್ ನೀಡಿದೆ

Spread the love

ಬೆಂಗಳೂರು: ಹೊಸಕೆರೆ ಹಳ್ಳಿಯ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಹೀಗಾಗಿ ಕಂದಾಯ ಸಚಿವ R.ಅಶೋಕ್‌ 25 ಸಾವಿರ ರೂ. ಪರಿಹಾರದ ಚೆಕ್​ ವಿತರಿಸಿದ್ದರು. ಇದು ಸಂತ್ರಸ್ಥರಿಗೆ ಕೊಂಚ ಖುಷಿ ನೀಡಿತ್ತು. ಆದರೆ ಪರಿಹಾರ ಹಣ ಪಡೆದವರಿಗೆ ಬಿಬಿಎಂಪಿ ಶಾಕ್ ನೀಡಲಿದೆ.

ದತ್ತಾತ್ರೇಯನಗರದಲ್ಲಿ ರಾಜಕಾಲುವೆ ಒತ್ತುವರಿಯಾದ ಹಿನ್ನೆಲೆಯಲ್ಲಿ ಒತ್ತುವರಿ ಜಾಗ ಪತ್ತೆಗೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಪರಿಹಾರ ಪಡೆದ 344 ಕುಟುಂಬಗಳ ಪೈಕಿ ರಾಜಕಾಲುವೆ ಒತ್ತುವರಿ ಜಾಗದಲ್ಲಿರುವ 100 ಕುಟುಂಬಗಳು ಬೀದಿಗೆ ಬೀಳಲಿವೆ. ಒತ್ತುವರಿ ಸರ್ವೆ ನಡೆದ್ರೆ 100 ಕಟ್ಟಡ ಡೆಮಾಲಿಷ್‌ ಆಗೋದು ಗ್ಯಾರಂಟಿ. ಹೀಗಾಗಿ ನಿನ್ನೆ ಪರಿಹಾರದ ಚೆಕ್ ಪಡೆದು ಖುಷಿ ಪಟ್ಟವರಿಗೆ ಮುಂದಿದೆ ಮಾರಿ ಹಬ್ಬ ಎಂಬಂತಾಗಿದೆ.ರಾಜಕಾಲುವೆ ಒತ್ತುವರಿ ತೆರವಿಗೆ ಸಚಿವ ಅಶೋಕ್‌ ಸೂಚನೆ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಪರಿಹಾರ ಪಡೆದ344 ಕುಟುಂಬಗಳ ಪೈಕಿ 100 ಕುಟುಂಬಗಳು ಒತ್ತುವರಿ ಜಾಗದಲ್ಲಿವೆ. ಮಳೆ ನೀರು ನುಗ್ಗಿ ಹಾನಿ ಹಿನ್ನೆಲೆಯಲ್ಲಿ ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದ ನಿವಾಸಿಗಳಿಗೆ ಸಚಿವ R.ಅಶೋಕ್‌ ನಿನ್ನೆ 25 ಸಾವಿರ ರೂ. ಪರಿಹಾರದ ಚೆಕ್​ ವಿತರಿಸಿದ್ದರು.


Spread the love

About Laxminews 24x7

Check Also

ಶಾಸಕ ಬಸವರಾಜ್ ಶಿವಗಂಗಾ ಪಿಎ ಆತ್ಮಹತ್ಯೆ

Spread the loveಬೆಂಗಳೂರು: ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ  ಪಿಎ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಉಪ್ಪಾರಪೇಟೆ ಬಳಿಯ ಲಾಡ್ಜ್‌ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ