ಕೆಂಪೇಗೌಡ ವಿಮಾನ ನಿಲ್ದಾಣ
ಬೆಂಗಳೂರು: ಅಕ್ರಮವಾಗಿ ವಿದೇಶಕ್ಕೆ ಸಾಗಣೆ ಮಾಡಲು ಮುಂದಾಗಿದ್ದ 6 ಕೋಟಿ ರೂ. ಮೌಲ್ಯದ ರಕ್ತ ಚಂದನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇಲ್ಲಿನ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ(ಕೆಐಎಬಿ) ಕಾರ್ಗೋ ಟರ್ಮಿನಲ್‍ನಲ್ಲಿ ರಕ್ತ ಚಂದನ ಜಪ್ತಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ತ ಚಂದನವನ್ನು ಅಕ್ರಮವಾಗಿ ಸಾಗಿಸುವ ಯತ್ನ ನಡೆದಿತ್ತು. ಅನುಮಾನಗೊಂಡು ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು, ಸರಕು ಸಾಗಣೆ ವಾಹನವನ್ನು ತಡೆಹಿಡಿದು, ಪರಿಶೀಲಿಸಿದಾಗ ಅಕ್ರಮ ಸಾಗಣೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
Laxmi News 24×7