Breaking News

ಮನೆ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಕ್ಷಣಮಾತ್ರದಲ್ಲಿ ದರೋಡೆ ಮಾಡುವ ಚಾಲಾಕಿ ಗ್ಯಾಂಗ್​..

Spread the love

ಬೆಂಗಳೂರು: ನೀವು ನಿಮ್ಮ ಬೈಕ್​ನ್ನ ಮನೆ ಹೊರಗಡೆ ನಿಲ್ಲಿಸ್ತಿದ್ದೀರಾ..? ಹಾಗಾದ್ರೆ ಹುಷಾರ್​ ಆಗಿರಿ. ಮನೆ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಕ್ಷಣಮಾತ್ರದಲ್ಲಿ ದರೋಡೆ ಮಾಡುವ ಚಾಲಾಕಿ ಗ್ಯಾಂಗ್​ ಒಂದು ಈಗ ನಗರದಲ್ಲಿ ಸಕ್ರಿಯವಾಗಿದೆ.

ವೀರಣ್ಣ ಪಾಳ್ಯದಲ್ಲಿ ವ್ಯಕ್ತಿಯೊಬ್ಬರು ತಮ್ಮ ಬೈಕ್​ನ್ನು ಮನೆಯ ಹೊರಗೆ ನಿಲ್ಲಿಸಿ ತಮ್ಮ ಅಪಾರ್ಟ್​ಮೆಂಟ್​ಗೆ ಹೋಗಿ ಬರೋದ್ರೊಳಗಾಗಿ ನಿಲ್ಲಿಸಿದ ಬೈಕ್​ ನಾಪತ್ತೆಯಾಗಿದೆ. ಒಳಗಡೆ ಹೋಗಿ ಬರೋದ್ರೊಳಗಾಗಿ ಬೈಕ್​ ಕಾಣದ್ದನ್ನ ಕಂಡು ಮಾಲೀಕ ಅರೆ ಕ್ಷಣ ಗಲಿಬಿಲಿಗೊಂಡಿದ್ದಾನೆ.

ತದನಂತರ ಸಿಸಿಟಿವಿ ಯ ದೃಶ್ಯಗಳನ್ನು ನೋಡಿದಾಗ ಕ್ಷಣಮಾತ್ರದಲ್ಲಿ ಖತರ್ನಾಕ್​ ಖದೀಮರು ಬೈಕ್​ ಎಗರಿಸಿದ ಪರಿಗೆ ಅಚ್ಚರಿಗೊಂಡಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಸಮೇತ ಗೋವಿಂದಪುರ ಪೊಲೀಸ್ ಠಾಣೆಗೆ ದೌಡಾಯಿಸಿದ ಬೈಕ್​ ಮಾಲೀಕ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ