ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಕೊಲೆಗಳು ನಡೆಯುತ್ತಿದ್ದು ಬೆಂಗಳೂರು ಬೆಚ್ಚಿಬಿದ್ದಿದೆ. ಒಂದೆಡೆ ಪೊಲೀಸರು ದಿಢೀರ್ ರೌಡಿಶೀಟರ್ಗಳ ಮನೆ ಮೇಲೆ ದಾಳಿ ನಡೆಸಿ, ರೌಡಿಗಳ ಪರೇಡ್ ನಡೆಸಿದ್ರೂ ಕ್ರೈಮ್ಗಳು ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಅದ್ರಲ್ಲೂ ಲಾಕ್ಡೌನ್ ಸಡಿಲಿಕೆಯಾಗಿ ಅನ್ಲಾಕ್ ಜಾರಿಯಾದ ಮೇಲೆ ಹಾಡಹಗಲೇ ಕೊಲೆಗಳು ನಡೆಯುತ್ತಿವೆ.
ಇತ್ತೀಚೆಗೆ ನಡೆದ ಕ್ರೈಂಗಳು..
1. ಜು. 19- ಯೂನಿಬ್ಯಾಂಕ್ ಒಳಗೆ ರೌಡಿಶೀಟರ್ ಬಬ್ಲಿ ಬರ್ಬರ ಹತ್ಯೆ.
2..ಜು. 2- ರಂದು ಹಾಡಹಗಲೇ ಬನಶಂಕರಿ ದೇವಾಲಯದ ಮೆಟ್ರೋ ಪಿಲ್ಲರ್ ಬಳಿ ಮಾರಕಾಸ್ತ್ರಗಳಿಂದ ಫೈನಾನ್ಶಿಯರ್ ಮದನ್ ಹತ್ಯೆ..
3. ಜೂ. 24- ಛಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಭೀಕರ್ ಕೊಲೆ..
4. ಜೂ. 21- ಜೈಲಿನಲ್ಲಿರುವ ರೌಡಿಯ ಪತ್ನಿ ಜೊತೆ ಅಕ್ರಮ ಸಂಬಂಧ ಕಾರಣಕ್ಕೆ ರಶೀದ್ ಮಲಬಾರು ಬಂಟನ ಕತ್ತು ಸೀಳಿ ಹತ್ಯೆ. 5.ಮೇ. 15- ಗಾರೆ ಕೆಲಸವನಿಗೆ ಮದ್ಯಕುಡಿಸಿ ಕತ್ತು ಬಿಗಿದು ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಮಲಗಿಸಲು ಯತ್ನ
6.ಮೇ 5- ಪೀಣ್ಯ ಕರಿ ಬೊಮ್ಮನಹಳ್ಳಿಯಲ್ಲಿರುವ ಜಿಲ್ಲಾ ಸಂಖ್ಯಾಧಿಕಾರಿಗಳ ಕಚೇರಿಯಲ್ಲಿ ಪಾಲಕರ ಹತ್ಯೆ..
7. ಏ. 10- ಆಟೋ ಚಾಲಕನ ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ನೆರೆ ಮನೆ ನಿವಾಸಿ.
8. ಏ. 7- ಬೆಂಗಳೂರು ವಿವಿ ಪ್ರಾಧ್ಯಾಪಕನ ತಾಯಿ ಹಾಗೂ ಸ್ನೇಹಿತನ ಕೊಲೆ..
9. ಏ. 7- ಡಿಜೆ ಹಳ್ಳಿಯಲ್ಲಿ ಮಸೀದಿ ಉಸ್ತುವಾರಿ ಜಗಳದಲ್ಲಿ ವ್ಯಕ್ತಿಯೊಬ್ಬನ ಹತ್ಯೆ.
10. ಏ. 23- ಬಂಡೆಪಾಳ್ಯದ ಸೋಮಸಂದ್ರಪಾಳ್ಯದಲ್ಲಿ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಿಯಕರ..
11. ಜುಲೈ 28- ರೌಡಿಶೀಟರ್ ಹರೀಶ್ ನ ಬಾಣಸವಾಡಿ ಸ್ಟೇಷನ್ ಮುಂದೆ ಹತ್ಯೆ ಮಾಡಲಾಗಿತ್ತು.
12. ಜುಲೈ 29- ಜಾಲಹಳ್ಳಿಯ ಮುತ್ಯಾಲನಗರದ ಬಳಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಮೇಲಡ ಹಲ್ಲೆಗೆ ಯತ್ನ