ಬೆಳಗಾವಿ : ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎ.ಜಿ.ಮುಳವಾಡಮಠ (58) ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ 1 ವಾರದ ಹಿಂದೆಯಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಕೊನೆಯೂಸಿರೆಳೆದಿದ್ದಾರೆ. ಕೊರೊನಾ ಸೋಂಕು ತಗುಲಿತ್ತು ಎಂದು ಹೇಳಲಾಗುತ್ತಿದೆ.
ವಕೀಲರ ಪರವಾಗಿ ಸರ್ಕಾರದಿಂದ ವಿರುದ್ಧ ಧ್ವನಿ ಎತ್ತುತ್ತಿದ್ದರು. ವಕೀಲರಿಗೆ ಅನ್ಯಾಯವಾದ್ರೆ ನ್ಯಾಯ ಸಿಗೋವರೆಗೂ ತಮ್ಮ ಹೋರಾಟದಲ್ಲಿ ಮಾಡುತ್ತಿದ್ದರು. ಜತೆಗೆ ಕಳೆದ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೇಟ್ ಆಕಾಂಕ್ಷಿಯೂ ಕೂಡಾ ಆಗಿದ್ದರು.