Breaking News

2 ದಿನಗಳಲ್ಲಿ ದೆಹಲಿಗೆ ಶೀಘ್ರವೇ ಸಂಪುಟ ರಚನೆ :.ಸಿಎಂ ಬೊಮ್ಮಾಯಿ

Spread the love

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಸಂಪುಟ ರಚನೆಯ ಕಸರತ್ತು ಶುರುವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ, ಕೆಲವರನ್ನು ಸಂಪುಟದಿಂದ ಕೈಬಿಟ್ಟು ಕ್ರಿಯಾಶೀಲ ಸಂಪುಟ ರಚನೆಯ ಸುಳಿವು ನೀಡಿದ್ದಾರೆ. ಒಂದೆರಡು ದಿನಗಳ ಬಳಿಕ ದೆಹಲಿಗೆ ಬರಲು ಹೈಕಮಾಂಡ್ ಸೂಚಿಸಿದ್ದು, ಆದಷ್ಟು ಶೀಘ್ರವೇ ಸಂಪುಟ ರಚನೆ ಮಾಡೋದಾಗಿ ಹೇಳಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಪಕ್ಷ ಬೇರೆ ಜವಾಬ್ದಾರಿ ನೀಡಿದರೆ ವಹಿಸಿಕೊಳ್ಳುವೆ. ಆದರೆ ಬೊಮ್ಮಾಯಿ ಸಂಪುಟ ಸೇರೋದಿಲ್ಲ ಅಂತ ಸ್ಪಷ್ಪಪಡಿಸಿದ್ದಾರೆ. ನಾನು ಮಾಜಿ ಸಿಎಂ ಆಗಿದ್ದರೂ, ಬಿಎಸ್‍ವೈ ಹಿರಿಯರಾಗಿದ್ದ ಕಾರಣ ಸಚಿವ ಸ್ಥಾನಕ್ಕೆ ಒಪ್ಪಿಕೊಂಡಿದ್ದೇ. ಈಗ ಸಂಪುಟ ಸೇರೋದಿಲ್ಲ ಅಂತ ಶೆಟ್ಟರ್ ಹೇಳಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರಕ್ರಿಯಿಸಿರೋ ಮಾಜಿ ಸಚಿವ ಈಶ್ವರಪ್ಪ, ಇನ್ನು ಬಹಳ ಬದಲಾವಣೆ ಆಗೋದು ಇದೆ. ಈ ಬಗ್ಗೆ ನಾಳೆ ಮಾತನಾಡ್ತೇನೆ ಅಂತ ಕುತೂಹಲದ ಬಾಂಬ್ ಸಿಡಿಸಿದ್ದಾರೆ.ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಅವರು, ಶೆಟ್ಟರ್ ಜೊತೆ ಮಾತನಾಡ್ತೇನೆ ಅಂದಿದ್ದಾರೆ. ಮೂರ್ನಾಲ್ಕು ದಿನದಲ್ಲಿ ಅಥವಾ ಇನ್ನೊಂದು ವಾರದಲ್ಲಿ ಬೊಮ್ಮಾಯಿ ಸಂಪುಟ ರಚನೆ ಮಾಡಬೇಕಿದೆ. ಇರೋದು 33 ಸ್ಥಾನ, ಆದರೆ ಆಕಾಂಕ್ಷಿಗಳ ಸಂಖ್ಯೆ ಇದಕ್ಕೆ ಮೂರು ಪಟ್ಟು ಹೆಚ್ಚಿದೆ. ಪ್ರಾದೇಶಿಕತೆ, ಜಾತಿ, ಪ್ರಭಾವ, ಹಿರಿತನ, ಅನುಭವ, ಯುವ ಶಾಸಕರು, ವಲಸಿಗರು.. ಹೀಗೆ ಎಲ್ಲಾ ಅಂಶಗಳನ್ನು ಪರಿಗಣಿಸಿ ಅತ್ಯಂತ ಸಮತೋಲಿತ ಕ್ಯಾಬಿನೆಟ್ ರಚಿಸಿಕೊಳ್ಳಬೇಕಿದೆ. ಇದರ ಮಧ್ಯೆ, ವಲಸಿಗರ ಟೆನ್ಶನ್ ಮುಂದುವರಿದಿದೆ. ಬೊಮ್ಮಾಯಿ ನೂತನ ಸಿಎಂ ಎಂದು ಘೋಷಣೆಯಾದ ಕ್ಷಣದಿಂದ ಅವರ ಹಿಂದೆ ಕೆಲ ವಲಸಿಗರು ಸುತ್ತುತ್ತಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ ಆಸ್ತಿ ವಿವಾದ, ಗಂಡ ಓಡಿಸುತ್ತಿದ್ದ ಕಾರಿಗೆ ಬೆಂಕಿ ಇಟ್ಟ ಪತ್ನಿ

Spread the love ಚಿಕ್ಕೋಡಿ: ಆಸ್ತಿ ವಿವಾದ ಹಿನ್ನೆಲೆ ಗಂಡ ಓಡಿಸುತ್ತಿದ್ದ ಈಕೋ ಕಾರಿಗೆ ಪತ್ನಿ ಬೆಂಕಿ ಇಟ್ಟಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ