Breaking News

1000ಕ್ಕೆ ಏರಿಕೆಯಾಗುತ್ತಾ ಲೋಕಸಭೆ ಕ್ಷೇತ್ರಗಳ ಸಂಖ್ಯೆ..?

Spread the love

ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೊಸ ಬಾಂಬ್ ಸಿಡಿಸಿದ್ದಾರೆ. ಸೆಂಟ್ರಲ್ ವಿಸ್ತಾದ ಹೊಸ ಸಂಸತ್​​ನಲ್ಲಿ ಲೋಕಸಭೆಯಲ್ಲಿ 1000 ಸೀಟುಗಳು ಇರಲಿವೆ ಅಂತ ನನಗೆ ಬಿಜೆಪಿ ಮೂಲಗಳಿಂದಲೇ ಮಾಹಿತಿ ಬಂದಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಲೋಕಸಭೆ ಸೀಟುಗಳ ಸಂಖ್ಯೆಯನ್ನು 1000ಕ್ಕೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕಳ್ಳುವ ಸಾಧ್ಯತೆ ಇದೆ ಅಂತ ತಿಳಿಸಿದ್ದಾರೆ. ಜೊತೆಗೆ ಸಂಸತ್​​​ನಲ್ಲಿ ಹೊಸ ಸಂಸತ್​​​​​​ನ ಕಟ್ಟಡ ವಿನ್ಯಾಸದ ಯೋಜನೆಯನ್ನು ಸಂಸತ್​ನಲ್ಲಿ ಮಂಡಿಸಬೇಕು.. ಒಂದು ವೇಳೆ ಸರ್ಕಾರದ ಈ ಹೆಜ್ಜೆ ನಿಜವಾದ್ರೆ ಈ ಬಗ್ಗೆ ಸಾರ್ವಜನಿಕ ಸಲಹೆ ಪಡೆಯೋ ಅಗತ್ಯತೆ ಇದೆ ಅಂತ ಹೇಳಿದಾರೆ. ಅಂದಹಾಗೆ 2022ರ ವೇಳೆ ಹೊಸ ಸಂಸತ್ ಭವನ ಕಾಮಗಾರಿ ಪೂರ್ಣಗೊಳಿಸೋ ಗುರಿ ಹೊಂದಲಾಗಿದೆ. ಇನ್ನು ಈ ವಿಚಾರವೇನೂ ಹೊಸತಲ್ಲ.

2019ರಲ್ಲಿ ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿದ್ದ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸದ್ಯ 545 ಇರೋ ಲೋಕಸಭೆ ಸದಸ್ಯರ ಸಂಖ್ಯೆಯನ್ನ 1000ಕ್ಕೆ ವಿಸ್ತರಿಸಬೇಕು. ಸಂಸತ್​​ನ ಸೆಂಟ್ರಲ್ ಹಾಲ್​ನಲ್ಲಿ ಲೋಕಸಭೆ ಕಲಾಪ ನಡೆಸಬೇಕು ಅಂತ ಹೇಳಿದ್ರು. ಇನ್ನು ದೇಶದ ಮೊದಲ ಲೋಕಸಭೆ ಎಲೆಕ್ಷನ್​​ನಲ್ಲಿ 461 ಸ್ಥಾನಗಳಿದ್ವು. ಮುಂದಿನ ಮೂರು ವರ್ಷಗಳಲ್ಲಿ ಇದನ್ನು 499ಕ್ಕೆ ಏರಿಸಲಾಯ್ತು. ನಂತರದಲ್ಲಿ 522 ಆಯ್ತು.. ಆಮೇಲೆ 530 ಆಯ್ತು. ಈಗ 545ಕ್ಕೆ ಬಂದು ನಿಂತಿದೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ