Breaking News

ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲಿದೆಯೇ ಒಲಾ ಸ್ಕೂಟರ್‌ ?

Spread the love

ಬೆಂಗಳೂರು ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿರುವ ಈ ಸಮಯದಲ್ಲಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಕಡೆಗೆ ದೃಷ್ಟಿ ಹಾಯಿಸುತಿದ್ದಾರೆ. ಇದೀಗ ದೇಶದ ಪ್ರಮುಖ ಆನ್‌ ಲೈನ್‌ ಕಾರು ಬುಕಿಂಗ್‌ ಸಂಸ್ಥೆ ಓಲಾ ಬೆಂಗಳೂರು ಸಮೀಪದ ಹೊಸೂರಿನಲ್ಲಿ ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ ಉತ್ಪಾದಣಾ ಘಟಕವನ್ನು ಆರಂಬಿಸಿದ್ದು ಇನ್ನೆರಡು ತಿಂಗಳಿನಲ್ಲಿ ಸ್ಕೂಟರ್‌ ಗಳು ರಸ್ತೆಗಿಳಿಯಲಿವೆ. ಈ ಸ್ಕೂಟರ್‌ ಒಂದು ಛಾರ್ಜಿಗೆ 240 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ ಎಂದು ತಿಳಿದು ಬಂದಿದ್ದು ಇದು ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಲಿದೆ.

ಎಲೆಕ್ಟ್ರಿಕ್ ವಾಹನಗಳ ಬುಕಿಂಗ್ ದೇಶದಲ್ಲಿ ಬಹಳ ಹೆಚ್ಚಾಗಿದೆ , ದೇಶದ ಓಲಾ ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್‌ ತೆರೆದಿದ್ದು ಕೇವಲ 24 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಬೈಕ್ ಗಳು ಬುಕಿಂಗ್ ಆಗಿದ್ದು ದೊಡ್ಡ ದಾಖಲೆಯನ್ನ ಸೃಷ್ಟಿ ಮಾಡಿದೆ. ಆಸಕ್ತ ಗ್ರಾಹಕರು ಕಂಪನಿಯ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡುವ ಮೂಲಕ ಕೇವಲ 499 ರೂಪಾಯಿಯನ್ನ ಕಟ್ಟು ಬೈಕ್ ಬುಕ್ ಮಾಡುತ್ತಿದ್ದಾರೆ. ಇನ್ನು ಬುಕಿಂಗ್ ತೆರೆದಿರುವುದರಿಂದ ಇನ್ನೆರಡು ತಿಂಗಳಿನಲ್ಲಿ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ. ಓಲಾ ಅಧ್ಯಕ್ಷ ಮತ್ತು ಸಮೂಹ ಸಿಇಒ ಭಾವೀಶ್ ಅಗರ್‌ವಾಲ್ ಅವರು ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕಾಗಿ ಭಾರತದಾದ್ಯಂತದ ಗ್ರಾಹಕರಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂರು ಮಾಡೆಲ್​ಗಳಲ್ಲಿ ಬಿಡುಗಡೆ ಮಾಡಲಿದೆ. ಸದ್ಯ ಕಂಪನಿ ಈ ಮೂರು ಮಾಡೆಲ್ ಗಳಿಗೆ ಓಲಾ ಎಸ್, ಎಸ್ 1 ಮತ್ತು ಓಲಾ ಎಸ್ 1 ಪ್ರೊ ಎಂದು ನಾಮಕರಣ ಮಾಡಿದೆ. ಇವುಗಳು ಕ್ರಮವಾಗಿ 2kW, 4kW ಮತ್ತು 7kW ಮೋಟರ್‌ಗಳನ್ನು ಹೊಂದು ಬಲಶಾಲಿಯಾಗಿವೆ. ಇನ್ನು ಬೇಸ್ ಮಾಡೆಲ್​ 45 ಕಿಲೋಮೀಟರ್ ವೇಗ ಹೊಂದಿದ್ದರೆ, ಎರಡನೆಯದು 70 ಕಿಲೋಮೀಟರ್ ವೇಗವನ್ನು ಹೊಂದಿರಲಿದೆ. ಹಾಗೆಯೇ 7kW ಮಾಡೆಲ್​ನ್ನು 95 ಕಿ.ಮೀ ವೇಗದಲ್ಲಿ ಓಡಿಸಬಹುದು.ಇನ್ನು ಈ ಸ್ಕೂಟರ್​ನ ಮೈಲೇಜ್ ಅದರ ವೇಗಕ್ಕೆ ಅನುಗುಣವಾಗಿರಲಿದೆ. 20 ಕಿ.ಮೀ ವೇಗದಲ್ಲಿ ಚಲಾಯಿಸಿದರೆ ಬರೋಬ್ಬರಿ 240 ಕಿ.ಮೀ ರೇಂಜ್ (ಮೈಲೇಜ್) ಸಿಗಲಿದೆ ಎಂದು ಕಂಪೆನಿ ತಿಳಿಸಿದೆ. ಇದರರ್ಥ ಕಡಿಮೆ ವೇಗದಲ್ಲಿ ಹೆಚ್ಚು ಮೈಲೇಜ್ ಸಿಗುವುದು ಗ್ಯಾರಂಟಿ .ಇನ್ನುಳಿದಂತೆ ಸಾಮಾನ್ಯ ವೇಗದಲ್ಲಿ 130-150 ಕಿಲೋಮೀಟರ್ ವ್ಯಾಪ್ತಿಯವರೆಗೆ ಆರಾಮಾಗಿ ಸಲೀಸಾಗಿ ಚಲಿಸಬಹುದು. ಇನ್ನು ಮಾಹಿತಿಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಈ ಬೈಕ್ ಗಳ ಬೆಲೆ 1 ಲಕ್ಷ ರೂಪಾಯಿ ಮತ್ತು ಮಾಡೆಲ್ ಗೆ ಅನುಗುಣವಾಗಿ ಅದರ ಬೆಲೆಯನ್ನ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಒಂದು ಕಾಲದಲ್ಲಿ ಭಾರತದ ರಸ್ತೆಗಳನ್ನು ಆಳಿದ ಬಜಾಜ್‌ ಕಂಪೆನಿ ಕೂಡ ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದು ಈ ಸ್ಕೂಟರ್‌ ಗಳ ದರ 1.5 ಲಕ್ಷ ರೂಪಾಯಿಗಳಾಗಲಿವೆ ಎನ್ನಲಾಗಿದೆ. ಅವು ಓಲಾದಷ್ಟು ಮೈಲೇಜ್‌ ಕೂಡ ಕೊಡದಿರುವುದರಿಂದ ಬೇಡಿಕೆ ಕಡಿಮೆ ಇದೆ. ಒಂದು ಲಕ್ಷ ರೂಪಾಯಿಯ ಒಳಗೆ 100 ಕಿಲೋಮೀಟರ್‌ ಗೂ ಹೆಚ್ಚು ಮೈಲೇಜ್‌ ಕೊಡುವ ಸ್ಕೂಟರ್‌ ಇನ್ನೂ ಭಾರತದಲ್ಲಿ ತಯಾರಾಗಿಲ್ಲ ಆದ್ದರಿಂದ ಓಲಾ ಸ್ಕೂಟರ್‌ ರಸ್ತೆ ರಾಜ ಆಗುವ ಸಾದ್ಯತೆ ಹೆಚ್ಚಾಗಿದೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ