ದಾವಣಗೆರೆ: ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೆ ನಗರಸಭೆ ಮುಂದೆ ಹಾಕಲಾಗಿದ್ದ ಅವರ ಬ್ಯಾನರ್ ತೆರವು ಮಾಡಲಾಗಿದೆ.
ಹರಿಹರ ನಗರಸಭೆ ಮುಂದೆ ನಿರ್ಗಮಿತ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರವುಳ್ಳ ಕೋವಿಡ್ ಜಾಗೃತಿ ಮೂಡಿಸುವ ಬ್ಯಾನರ್ ಹಾಕಲಾಗಿತ್ತು. ಇತ್ತ ಇಂದು ಯಡಿಯೂರಪ್ಪನವರು ರಾಜೀನಾಮೆ ಘೋಷಿಸುತ್ತಿದ್ದಂತೆ ನಗರ ಸಭೆ ಸಿಬ್ಬಂದಿ ಬ್ಯಾನರನ್ನು ತೆರವು ಮಾಡಿದ್ದಾರೆ.