ಗದಗ: ಛತ್ತೀಸ್ಘಡದಲ್ಲಿ ನಕ್ಸಲರೊಂದಿಗೆ ಹೋರಾಡುತ್ತಾ ಹುತಾತ್ಮನಾದ ಯೋಧನ ಅಂತ್ಯಕ್ರಿಯೆ ತಡರಾತ್ರಿ ಗದಗ ಜಿಲ್ಲೆಯ ಸ್ವಗ್ರಾಮ ಗೊಜನೂರಿನಲ್ಲಿ ನಡೆದಿದೆ.

ನಕ್ಸಲರೊಂದಿಗೆ ಹೋರಾಡುವಾಗ ಗುಂಡು ತಗುಲಿ ಎರಡು ದಿನಗಳ ಹಿಂದೆ ಯೋಧ ಲಕ್ಷ್ಮಣ ಗೌರಣ್ಣವರ್ (30) ಹುತಾತ್ಮರಾಗಿದ್ದರು.. ರಾತ್ರಿ 11 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಗ್ರಾಮಕ್ಕೆ ಬಂದಿದ್ದು ತಡರಾತ್ರಿ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.. ಯೋಧನ ಸಾವಿಗೆ ಇಡೀ ಗ್ರಾಮಕ್ಕೆ ಗ್ರಾಮವೇ ಕಂಬಿನಿ ಮಿಡಿದಿದೆ.
Laxmi News 24×7