Breaking News

ಹತ್ತು ಲಕ್ಷ ರೂ ಊಡಾಯಿಸಿದ್ದ ಆರೋಪಿಯನ್ನು ಬಂಧಿಸಿ ,ಆತನ ನೂರಾರು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿ ಗಡ್ಡೇಕರ ನೇತ್ರತ್ವದ ಸೈಬರ್ ಕ್ರೈಂ ಪೋಲೀಸ್ ತಂಡ ಯಶಸ್ವಿಯಾಗಿದೆ.

Spread the love

ಬೆಳಗಾವಿ-ಕೆಲವು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಅವ್ಯಾಹತವಾಗಿ ಸರಗಳ್ಳತನ ಮಾಡುತ್ತಿದ್ದ ಜಾಮತಾರಾ chine scratching ಗ್ಯಾಂಗ್ ಮೇಲೆ ಗೋಲೀಬಾರ್ ಮಾಡಿ ಸರಗಳ್ಳರನ್ನು ಎನ್ ಕೌಂಟರ್ ಮಾಡಿ ಬೆಳಗಾವಿ ನಗರವನ್ನು ಸರಗಳ್ಳರಿಂದ ಮುಕ್ತ ಮಾಡಿದ್ದ ಸಿಪಿಐ ಗಡ್ಡೇಕರ ಈಗ ಸೈಬರ್ ಕ್ರೈಂ ಸಿಪಿಐ ಆಗಿ ಅಲ್ಪಾವಧಿಯಲ್ಲೇ ಪ್ರಕರಣವೊಂದನ್ನು ಪತ್ತೆ ಮಾಡಿ ವಿಶೇಷ ಸಾಧನೆಗೈದಿದ್ದಾರೆ‌.

 

 

ಕಳೆದ ತಿಂಗಳು ಬೆಳಗಾವಿಯ ಬಿಎಸ್ಎನ್ಎಲ್ ನಿವೃತ್ತ ಸಿಬ್ಬಂಧಿಯೊಬ್ಬರ ಖಾತೆಯಿಂದ ಸಮಾರು ಹತ್ತು ಲಕ್ಷ ರೂ ಊಡಾಯಿಸಿದ್ದ ಜಾರ್ಖಂಡ್ ರಾಜ್ಯದ ಜಾಮತಾರಾ ಮೂಲದ ಆರೋಪಿಯನ್ನು ಬಂಧಿಸಿ ,ಆತನ ನೂರಾರು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿ ಹನ್ನೆರಡು ಲಕ್ಷ ರೂಗಳನ್ನು ರಿಕವರಿ ಮಾಡುವಲ್ಲಿ ಸಿಪಿಐ ಗಡ್ಡೇಕರ ನೇತ್ರತ್ವದ ಸೈಬರ್ ಕ್ರೈಂ ಪೋಲೀಸ್ ತಂಡ ಯಶಸ್ವಿಯಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಡಿಸಿಪಿ ವಿಕ್ರಂ ಆಮಟೆ,ಬಿಎಸ್ಎನ್ಎಲ್ ನಿವೃತ್ತ ಸಿಬ್ಬಂಧಿಯೊಬ್ಬರ ಖಾತೆಯಿಂದ ಹತ್ತು ಲಕ್ಷ ರೂ ಲಪಟಾಯಿಸಿದ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಇಐ ಗಡ್ಡೇಕರ ನೇತ್ರತ್ವದ ತಂಡ , ತ್ವರಿತಗತಿಯಲ್ಲಿ ತನಿಖೆ ಮಾಡಿ ವಂಚನೆ ಪ್ರಕರಣವನ್ನು ಪತ್ತೆ ಮಾಡಿದೆ ಎಂದು ಪ್ರಶಂಸೆ ವ್ಯೆಕ್ತಪಡಿಸಿದರು.

 

ಜಾಮತಾರಾ ಅಡ್ಡೆಗೆ ಕಾಲಿಡುವದು ದೊಡ್ಡ ಸಹಾಸ….

ಜಾರ್ಖಂಡ್ ರಾಜ್ಯದಲ್ಲಿ ಜಾಮತಾರಾ ಎನ್ನುವ ಪ್ರದೇಶವೊಂದಿದೆ ,ಚೈನ್ ಸ್ಕ್ರ್ಯಾಚಿಂಗ್,ಬಗೆ ಬಗೆಯ ಸೈಬರ್ ಕ್ರೈಂ,ದರೋಡೆ,ಮಾಡುವ ಕ್ರಿಮಿನಲ್ ಗಳು ಇದೇ ಪ್ರದೇಶದಲ್ಲಿ ಇರುತ್ತಾರೆ. ಯಾವುದೇ ಅಪರಾಧ ಪ್ರಕರಣಕ್ಕೆ ಜಾಮತಾರಾ ಲಿಂಕ್ ಕಾಣಿಸಿದ್ರೆ ಆ ಪ್ರಕರಣ ಹಳ್ಳ ಹಿಡಿದಂತೆ ಎನ್ನುವ ಆತಂಕ ಈಗಲೂ ಇದೆ.ಯಾಕಂದ್ರೆ ಈ ಜಾಮತಾರಾ ಕ್ರಮಿನಲ್ ಗಳನ್ನು ವಶಕ್ಕೆ ಪಡೆಯುವದು ಸುಲಭದ ಮಾತಲ್ಲ. ಆದ್ರೆ ಬೆಳಗಾವಿಯ ಸೈಬರ್ ಸಿಇಎನ್ ಪೋಲೀಸರು ಜಾಮತಾರಾ ಮೂಲದ ಆರೋಪಿಯನ್ನು ಪತ್ತೆ ಮಾಡಿ ಆತನನ್ನು ಬಂಧಿಸಿ ಈತನ ಶಾಮೀಲಾಗಿದ್ದ ಮಹಾರಾಷ್ಟ್ರ ನಾಸೀಕ್ ಮೂಲದ ಆರೋಪಿಯನ್ನು ಬಂಧಿಸಿ ಇವರಿಂದ ಹನ್ನೆರಡು ಲಕ್ಷ ರೂ,ಹಾಗು ವಂಚಿಸಲು ಉಪಯೋಗಿಸಿದ್ದ ಮೋಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ವಂಚಕರಿಗೆ ನೂರು ಬಾರಿ ಓಟಿಪಿ ಶೇರ್ ಮಾಡಿ ಹತ್ತು ಲಕ್ಷ ರೂ ಕಳೆದುಕೊಂಡಿದ್ದ ಬೆಳಗಾವಿಯ ಬಿಎಸ್ಎನ್ಎಲ್ ನಿವೃತ್ತ ಸಿಬ್ಬಂಧಿ ಜಾಧವ ಗೆ ಕೊನೆಗೂ ನ್ಯಾಯ ಸಿಕ್ಕಿದೆ.ಶೀಘ್ರದಲ್ಲೇ ಆತನ ಖಾತೆಗೆ ಹತ್ತು ಲಕ್ಷ ರೂ ವರ್ಗಾವಣೆ ಆಗಲಿದೆ.


Spread the love

About Laxminews 24x7

Check Also

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Spread the love ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್‌ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ