Breaking News

ವಿದ್ಯಾಕಾಶಿ ಧಾರವಾಡದಲ್ಲಿ SSLC ಪರೀಕ್ಷೆ : ವಿದ್ಯಾರ್ಥಿಗಳಿಗೆ ಚಾಕೊಲೇಟ್ ‌ಸ್ವಾಗತ

Spread the love

ಧಾರವಾಡ : ಜಿಲ್ಲೆಯಲ್ಲಿ ಎಸ್‌ಎಸ್‌ಎಲಸಿ‌ ಪರೀಕ್ಷೆ ಆರಂಭಗೊಂಡಿದ್ದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಶುಭ ಹಾರೈಸಿದ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ರೆಡ್ ಕಾರ್ಪೆಟ್ ಹಾಸಿ, ಚಾಕೊಲೇಟ್ ನೀಡಿ ಸ್ವಾಗತಿಸಿ ಗಮನ ಸೆಳೆದಿವೆ. ಇಲ್ಲಿನ.ಮಾಳಮಡ್ಡಿಯಲ್ಲಿರುವ ಕೆ.ಇ.ಬೋರ್ಡ್ ಶಾಲೆಯ ಆಡಳಿತ ಮಂಡಳಿಯ ಸದಸ್ಯರೆಲ್ಲಾ ಪರೀಕ್ಷೆ ಬರೆಯಲು ಬಂದ ಎಲ್ಲಾ ವಿದ್ಯಾರ್ಥಿಗಳಿಗೆ ಚಾಕೊಲೇಟ್ ನೀಡಿ ಅವರಿಗೆ ಸ್ವಾಗತಿಸಿದರು.

ಶಾಲೆಯ ದ್ವಾರ ಬಾಗಿಲಿಗೆ ಬಲೂನಿನಿಂದ ಅಲಂಕಾರ ಮಾಡಿ, ತಳಿರು ಕಟ್ಟಿಸಿಂಗರಿಸಲಾಗಿತ್ತು. ಕೋವಿಡ್ ಬಗ್ಗೆ ಪರೀಕ್ಷಾರ್ಥಿಗಳು‌ಅಂಜಿಕೊಳ್ಳುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಆರೋಗ್ಯ ದಲ್ಲಿ ಏರುಪೇರು ಇದ್ದರೆ ಕೂಡಲೆ ಶಾಲೆ ಮುಖ್ಯಸ್ಥರ ಗಮನಕ್ಕೆ ತನ್ನಿ ನಾವು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡುತ್ತೇವೆ ಎನ್ನುವ ಫಲಕ ಹಿಡಿದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಇದೇ ರೀತಿಯಲ್ಲಿ ಕೆಲವು ಗ್ರಾಮಗಳಲ್ಲಿ ಕೂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಗೆ ಬಂದಾಗ ಹೂವು ಮತ್ತು ಚಾಕೊಲೇಟ್ ನೀಡಿ ಸ್ವಾಗತಿಸಿದ್ದು, ಎಲ್ಲೆಡೆ ಆರೋಗ್ಯ ಇಲಾಖೆಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆ ಯರು ಹಾಜರಿದ್ದು ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ನೀಡಿ, ಜ್ವರ ತಪಾಸನೆ ಮಾಡಿ ಕೊರೊನಾ ತಡೆ ಜಾಗ್ರತೆ ಕ್ರಮ ಅನುಸರಿಸಲು ಸಲಹೆ ನೀಡಿದರು.


Spread the love

About Laxminews 24x7

Check Also

ನಮಗೆ ಇ.ಡಿ ಸಮನ್ಸ್ ಮೂಲಕ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Spread the loveಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ