Breaking News

ಅಧಿಕಾರ ಹೋದರೆ ಒಂದು ಗೂಟ ಹೋಯ್ತು ಅಂದುಕೊಳ್ತೀನಿ. ನಾನು ಯಾವತ್ತೂ ಗೂಟಕ್ಕೆ ಅಂಟಿಕೊಂಡು ಕುಳಿತಿಲ್ಲ: ಈಶ್ವರಪ್ಪ,

Spread the love

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಳೀನ್ ಕುಮಾರ್ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ, ಅವರನ್ನು ಬಲಿಪಶು ಮಾಡಲು ಹೊರಟಂತಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಒಂದುವೇಳೆ ನನ್ನ ವಿರುದ್ಧ ಸಂಚು ನಡೆದರೂ ನಾನು ತಲೆ ಕೆಡಿಸಿಕೊಳ್ಳಲ್ಲ, ಅಧಿಕಾರ ಹೋದರೆ ಒಂದು ಗೂಟ ಹೋಯ್ತು ಅಂದುಕೊಳ್ತೀನಿ. ನಾನು ಯಾವತ್ತೂ ಗೂಟಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂದು ಅಸಮಾಧಾನ ಹೊಸಹಾಕಿದರು. ಇದೇ ವೇಳೆ ನನಗೆ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಕೆಲಸ ಮಾಡ್ತೀನಿ. ಯುವಕರಿಗೆ ಆದ್ಯತೆ ನಿಡಿದರೆ ತಪ್ಪೇನು? ಎಂದಿದ್ದಾರೆ.

ನಮ್ಮ ರಾಜ್ಯಾಧ್ಯಕ್ಷರ ಮೇಲೆ ನನಗೆ ನಂಬಿಕೆ ಇದೆ. ಆಡಿಯೋ ತನಿಖೆಯಾಗಲಿ ಎಂದು ಸ್ವತ: ಕಟೀಲ್ ಅವರೇ ಹೇಳಿದ್ದಾರೆ. ಹಾಗಾಗಿ ಆಡಿಯೋ ಮೊದಲು ತನಿಖೆಯಾಗಲಿ ಎಂದರು.

Spread the love

About Laxminews 24x7

Check Also

ಕಲ್ಯಾಣ ಕ್ರಾಂತಿಯ ಶರಣೆ ಕಲ್ಯಾಣಮ್ಮ‌ನ ಐಕ್ಯಸ್ಥಳ ದುಸ್ಥಿತಿಯಲ್ಲಿ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

Spread the love ಕಲ್ಯಾಣ ಕ್ರಾಂತಿಯ ಶರಣೆ ಕಲ್ಯಾಣಮ್ಮ‌ನ ಐಕ್ಯಸ್ಥಳ ದುಸ್ಥಿತಿಯಲ್ಲಿ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಜಗಜ್ಯೋತಿ ಬಸವಣ್ಣನವರ ನೇತೃತ್ವದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ