Breaking News

ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರು ರಾಘವೇಂದ್ರ ಸ್ವಾಮಿಗಳ 349 ನೇ ಆರಾಧನಾ ಮಹೋತ್ಸವ

Spread the love

ರಾಯಚೂರು: ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರು ರಾಘವೇಂದ್ರ ಸ್ವಾಮಿಗಳ 349 ನೇ ಆರಾಧನಾ ಮಹೋತ್ಸವಕ್ಕೆ ಇಂದು ಉತ್ತರರಾಧನೆ ಸಂಭ್ರಮದ ಮೂಲಕ ತೆರೆ ಬಿದ್ದಿದೆ.ಪ್ರತಿ ವರ್ಷ ಉತ್ತರರಾಧನೆ ದಿನ ಮಂತ್ರಾಲಯದಲ್ಲಿ ಮಹಾರಥೋತ್ಸವ ನಡೆಯುತ್ತಿತ್ತು. ಆದ್ರೆ ಈ ಬಾರಿ ಕೊರೊನಾ ಆತಂಕ ಹಿನ್ನೆಲೆ ಮಠದ ಪ್ರಾಂಗಣದಲ್ಲಿ ಮಾತ್ರ ರಥೋತ್ಸವ ನಡೆಯಿತು. ಇಂದು ವಸಂತೋತ್ಸವ, ಮೂಲರಾಮದೇವರ ಪೂಜೆ ಸೇರಿ ನಾನಾ ವಿಶೇಷ ಪೂಜೆ ಹಾಗೂ ಮಹಾಪಂಚಾಮೃತ ಅಭೀಷೇಕದೊಂದಿಗೆ ಉತ್ತರರಾಧನೆ ನಡೆಯಿತು.

ಆಗಸ್ಟ್ 2 ರಿಂದ ಆರಂಭವಾದ ಸಪ್ತರಾತ್ರೊತ್ಸವ ಆಗಸ್ಟ್ 8 ರವರೆಗೆ ನಡೆಯಲಿದೆ. ಶನಿವಾರ ಸರ್ವಸಮರ್ಪಣೋತ್ಸವ ಕಾರ್ಯಕ್ರಮದೊಂದಿಗೆ ಆರಾಧನಾ ಕಾರ್ಯಕ್ರಮ ಸಂಪೂರ್ಣ ಮುಕ್ತಾಯಗೊಳ್ಳಲಿದೆ. ಕೇವಲ ಸೀಮಿತ ಸಿಬ್ಬಂದಿ ಹಾಗೂ ಭಕ್ತಾಧಿಗಳು ಮಾತ್ರ ಆರಾಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮೂಲಕ ಅತ್ಯಂತ ಸರಳವಾಗಿ ಈ ಬಾರಿ ರಾಯರ ಆರಾಧನಾ ಮಹೋತ್ಸವ ಮುಕ್ತಾಯಗೊಂಡಿದೆ.


Spread the love

About Laxminews 24x7

Check Also

ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಬೆಳಗಾವಿ ಝೊನಲ್ ಚೇರ್ಮನ್ ಮಲ್ಲಾರಿ ದಿವಟೆ ಭೇಟಿ.

Spread the love ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಬೆಳಗಾವಿ ಝೊನಲ್ ಚೇರ್ಮನ್ ಮಲ್ಲಾರಿ ದಿವಟೆ ಭೇಟಿ. ಸಮಾಜದ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ