Breaking News

ಹಳ್ಳಕ್ಕೆ ಜಾರಿದ ಬಸ್: ಅಪಾಯದಿಂದ ಪಾರಾದ ಪ್ರಯಾಣಿಕರು

Spread the love

ಚಾಮರಾಜನಗರ): ಜೀಪ್ ಅಡ್ಡಲಾಗಿ ಬಂದು ಬಸ್ ಗೆ ಗುದ್ದಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್ ಟಿಸಿ ಬಸ್ ಹಳ್ಳಕ್ಕೆ ಜಾರಿದ ಘಟನೆ ತಾಲೂಕಿನ ಹಿಮವದ್ ಗೋಪಾಲ ಸ್ವಾಮಿ ಬೆಟ್ಟದ ಮಾರ್ಗ ಮಧ್ಯೆದಲ್ಲಿ ಭಾನುವಾರ ಮಧ್ಯಾಹ್ನ ಜರುಗಿದೆ.

ಗೋಪಾಲ ಸ್ವಾಮಿ ಬೆಟ್ಟದಲ್ಲಿ ದೇವರ ದರ್ಶನ ಮುಗಿಸಿದ ನಂತರ ಬಸ್ ಕೆಳಗೆ ಇಳಿಯುತ್ತಿದ್ದ ವೇಳೆ ಬೆಟ್ಟದ ಮೇಲೆ ತೆರಳುತ್ತಿದ್ದ ಜೀಪ್ ವೊಂದು ಚಾಲಕ ನಿಯಂತ್ರಣ ತಪ್ಪಿ ಬಸ್ ನ ಬಲ ಭಾಗಕ್ಕೆ ಗುದ್ದಿದೆ. ಇದರಿಂದ ಬಸ್ ಹಳ್ಳಕ್ಕೆ ಜಾರಿದೆ ಎನ್ನಲಾಗಿದೆ.

ಬಸ್ ನಲ್ಲಿ 40 ಮಂದಿ ಪ್ರಯಾಣಿಕರಿದ್ದರು. ಎಲ್ಲರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಜೀಪ್ ನ ಒಂದು ಭಾಗ ಜಖಂ ಆಗಿದೆ.

ಈ ಕುರಿತು ಗುಂಡ್ಲುಪೇಟೆ ಬಸ್ ಡಿಪೋ ವ್ಯವಸ್ಥಾಪಕ ಜಯಕುಮಾರ್ ಪ್ರತಿಕ್ರಯಿಸಿ, ಜೀಪ್ ಗೆ ದಾರಿ ಕೊಡಲು ಹೋಗಿ ಈ ಅವಘಡ ಸಂಭವಿಸಿದ್ದು, 40 ಮಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ