ಚಿಕ್ಕೋಡಿ ರೈಲ್ವೆ ನಿಲ್ದಾಣ ಬಳಿ ಶನಿವಾರ ರಾತ್ರಿ ಬೈಕ್ ಹಾಗೂ ಅಪರಿಚಿತ ವಾಹನ ನಡುವೆ ಡಿಕ್ಕಿ ಸಂಭವಿಸಿ ಯುವಕನೋರ್ವ ಸಾವಿಗೀಡಾಗಿದ್ದಾನೆ.
ಬೈಕ್ ಮೇಲೆ ಇದ್ದ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಗರಮುನ್ನೋಳಿ ಗ್ರಾಮದ ಸಿದ್ದಪ್ಪಾ ಪ್ರಕಾಶ ಜಿಪರೆ (೨೫) ಸಾವನಪ್ಪಿದ್ದಾನೆ.
ಮಾಳಪ್ಪಾ ಗುಳಪ್ಪಾ ಕೊಟಬಾಗಿ ಗಂಭೀರವಾಗಿ ಗಾಯಗೊಂಡು ಗೋಕಾಕ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನಾ ಸ್ಥಳಕ್ಕೆ ರೈಲ್ವೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿರುತ್ತಾರೆ. ಮೃತ ಸಿದ್ದಪ್ಪಾ ಜಿಪರೆ ತಾಯಿ, ಪತ್ನಿ, ಒಂದು ವರ್ಷದ ಗಂಡು ಮಗು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
Laxmi News 24×7