Breaking News

ಧಾರವಾಡ : ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

Spread the love

ಧಾರವಾಡ: ಕಟ್ಟಡ ಕಾಮಗಾರಿ ಕೆಲಸಕ್ಕೆ ಬಂದ ಪಾಲಕರೊಂದಿಗೆ ಬಂದಿದ್ದ 6 ವರ್ಷದ ಬಾಲಕ ಬೀದಿನಾಯಿಗಳಿಗೆ ಬಲಿಯಾಗಿದ್ದಾನೆ.

ಧಾರವಾಡ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ಕಟ್ಟಡವೊಂದರ ಕಾಮಗಾರಿ ನಡೆಯುತ್ತಿತ್ತು. ರಾಯಚೂರು ಜಿಲ್ಲೆಯ ಲಿಂಗಸೂರು ಮೂಲದ ಗೋಪಾಲ್ ಮತ್ತು ಚನ್ನಮ್ಮ ದಂಪತಿ ಕೆಲಸಕ್ಕೆಂದು ನವಲೂರಿಗೆ ಬಂದಿದ್ದರು. ಜತೆಯಲ್ಲಿ 6 ವರ್ಷದ ಮಗ ಬಾಬೂಲ್ ರಾಠೋಡನನ್ನೂ ಕರೆತಂದಿದ್ದರು.

ಎಂದಿನಂತೆ ಗುರುವಾರ ಪೋಷಕರರು ಕೆಲಸ ಮಾಡುತ್ತಿದ್ದರು. ಬೆಳಗ್ಗೆ ತಿಂಡಿ ತಿನ್ನಲೆಂದು ಕೆಲಸದ ಜಾಗದಲ್ಲಿ ಬಾಲಕನ್ನು ಬಿಟ್ಟು ಪಾಲಕರು ಹೋಗಿದ್ದರು. ಅಲ್ಲೇ ಆಟವಾಡಿಕೊಂಡಿದ್ದ ಬಾಲಕನ ಮೇಲೆ 8 ನಾಯಿಗಳು ಏಕಾಏಕಿ ದಾಳಿ ಮಾಡಿ ಕೊಂದಿವೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ