Breaking News

ಧಾರವಾಡದಲ್ಲಿ ರಕ್ತದ ಕೊರತೆ- ಗರ್ಭಿಣಿಯರಿಗೂ ಸಿಗುತ್ತಿಲ್ಲ ಬ್ಲಡ್

Spread the love

ಧಾರವಾಡ: ಜಿಲ್ಲೆಯಲ್ಲಿ ಯಾವುದೇ ಬ್ಲಡ್ ಬ್ಯಾಂಕ್ ಗೆ ಹೋಗಿ ಕೇಳಿದರೂ ‘ನೋ ಸ್ಟಾಕ್’ ಉತ್ತರ ಸಿಗುತ್ತಿದ್ದು, ಬಹುತೇಕ ಬ್ಲಡ್ ಬ್ಯಾಂಕ್ ಗಳು ದಾನಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಯುವ ಜನತೆ ರಕ್ತ ದಾನ ಮಾಡುತ್ತಿಲ್ಲ.

18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ಹಾಕುವುದಕ್ಕೆ ಶುರು ಮಾಡಿದ ಬಳಿಕ ಜಿಲ್ಲೆಯಲ್ಲಿ ತೀರಾ ರಕ್ತದ ಕೊರತೆ ಉದ್ಭವಿಸಿದೆಯಂತೆ. ಮುಖ್ಯವಾಗಿ ರಕ್ತದಾನ ಮಾಡುವವರು ಇದೇ ವಯೋಮಾನದವರಾಗಿರುವ ಕಾರಣ ಈಗ ಲಸಿಕೆಯೇ ಮುಖ್ಯವಾಗಿದ್ದು, ರಕ್ತದಾನವನ್ನು ಎಲ್ಲರೂ ಮರೆಯುತ್ತಿದ್ದಾರೆ. ಇದರಿಂದಾಗಿ ಜಿಲ್ಲಾ ಆಸ್ಪತ್ರೆಯ ದೊಡ್ಡ ರಕ್ತ ಭಂಡಾರದಲ್ಲೇ ನಿತ್ಯ 2 ರಿಂದ 3 ಯುನಿಟ್ ಮಾತ್ರ ರಕ್ತ ಸಂಗ್ರಹ ಆಗುತ್ತಿದೆ.ರಕ್ತದ ಕೊರತೆಯ ಪರಿಣಾಮ ಗರ್ಭೀಣಿಯರು ಹಾಗೂ ಥಲೆಸ್ಮಿಯಾ ರೋಗಿಗಳ ಮೇಲೆ ಬೀರಿದೆ ಎಂದು ವೈದ್ಯರು ಹೇಳಿದ್ದಾರೆ.

 

ಬೇರೆಲ್ಲ ಶಸ್ತ್ರಚಿಕಿತ್ಸೆಗಳ ಬೇಡಿಕೆ ಇಲ್ಲದಿದ್ದರೂ ಥಲೆಸ್ಮಿಯಾ ರೋಗಿಗಳಿಗೆ ನಿರಂತರವಾಗಿ ರಕ್ತ ಬೇಕಾಗಿರುವ ಕಾರಣಕ್ಕೆ ಅದು ನಿಶ್ಚಿತ ಬೇಡಿಕೆ. ಇದನ್ನೂ ಸರಿದೂಗಿಸಲು ಆಗುತ್ತಿಲ್ಲ. ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಸೇರಿ ಒಟ್ಟು 12ಕ್ಕೂ ಹೆಚ್ಚು ರಕ್ತ ಭಂಡಾರಗಳು ಧಾರವಾಡ ಜಿಲ್ಲೆಯಲ್ಲಿವೆ. ಆದರೆ ಎಲ್ಲಿಯೂ ರಕ್ತವೇ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ