Breaking News

ಪಿಗ್ಗಿ ಬ್ಯಾಂಕ್‌ನ ಹಣವನ್ನು ಬಡವರ ಚಿಕಿತ್ಸೆಗೆ ನೀಡಿದ ಪುತ್ತೂರಿನ ಬಾಲೆ

Spread the love

ಮಂಗಳೂರು, ಜುಲೈ 2: ಬಡವರ ಚಿಕಿತ್ಸೆಯ ಖರ್ಚಿಗೆ ತನ್ನ ಪಿಗ್ಗಿ ಬ್ಯಾಂಕ್‌ನ ಹಣವನ್ನು ಆಸ್ಪತ್ರೆಗೆ ನೀಡಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಪುಟ್ಟ ಬಾಲೆ ಮಾದರಿಯಾಗಿದ್ದಾಳೆ.

ಪುತ್ತೂರಿನ ವಿವೇಕಾನಂದ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ದಿಶಾ, ತನ್ನ ಪಿಗ್ಗಿ ಬ್ಯಾಂಕ್‌ನಲ್ಲಿ ತಾನು ಜತನದಿಂದ ಕಾಪಾಡಿಕೊಂಡು ಬಂದಿದ್ದ ಸುಮಾರು ಹತ್ತು ಸಾವಿರ ರೂಪಾಯಿಯನ್ನು ಆಸ್ಪತ್ರೆಗೆ ನೀಡಿದ್ದಾಳೆ.

ಪುತ್ತೂರಿನ ಖ್ಯಾತ ಸರ್ಜನ್ ಡಾ.ಎಂ.ಕೆ. ಪ್ರಸಾದ್‌ಗೆ ತನ್ನ ಪಿಗ್ಗಿ ಹಣ ನೀಡಿರುವ ದಿಶಾ, ಬಡವರ ಚಿಕಿತ್ಸಾ ವೆಚ್ಚಕ್ಕೆ ಭರಿಸುವಂತೆ ಮನವಿ ಮಾಡಿದ್ದಾಳೆ. ಪುತ್ತೂರಿನ ಡಾ.ಅನಿಲಾ ಮತ್ತು ದೀಪಕ್ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ದಿಶಾ, ತನ್ನ ಹುಟ್ಟು ಹಬ್ಬವನ್ನೂ ಬಹಳ ಸರಳವಾಗಿ ಮಾಡುವಂತೆ ಹೆತ್ತವರಿಗೆ ತಿಳಿಸಿದ್ದಳು.

ಸದ್ಯ ಕೊರೊನಾ ಸೋಂಕು ಹಾಗೂ ಲಾಕ್‌ಡೌನ್‌ನಿಂದ ಬಡವರಿಗಾಗುತ್ತಿರುವ ಸಂಕಷ್ಟದ ಬಗ್ಗೆ ಮಾಧ್ಯಮಗಳಿಂದ ಅರಿತಿದ್ದಳು. ಇದರಿಂದ ತನ್ನ ಸ್ವಇಚ್ಛೆಯಿಂದಲೇ ತಾನೂ ಬಡವರಿಗೆ ಸಹಾಯ ಮಾಡಬೇಕೆಂದು ಹೆತ್ತವರಿಗೆ ಮನದ ಇಂಗಿತವನ್ನು ದಿಶಾ ಹೇಳಿದ್ದಳು.

 

 

ಮಗಳ ಆಸೆಯಂತೆಯೇ ಹೆತ್ತವರು ದಿಶಾ ಕೂಡಿಟ್ಟ ಹಣವನ್ನು ಬಡವರ ಚಿಕಿತ್ಸೆಯ ಖರ್ಚಿಗೆ ನೀಡಿದ್ದಾರೆ. ಪುತ್ತೂರಿನ ಪುಟ್ಟ ಬಾಲೆಯ ಹೃದಯ ವೈಶ್ಯಾಲತೆ ಎಲ್ಲರಿಗೂ ಮಾದರಿಯಾಗಿದೆ.


Spread the love

About Laxminews 24x7

Check Also

2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ*

Spread the love 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ(ಶಿಡ್ಲಘಟ್ಟ), …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ