ಬೆಂಗಳೂರು: “ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಈಗಾಗಲೇ ಹತ್ತು ಜನ ಮುಖ್ಯಮಂತ್ರಿಯಾಗಲು ಸೂಟು-ಬೂಟು ಹೊಲಿಸಿಕೊಂಡು ಕಾದುಕುಳಿತಿದ್ದಾರೆ. ಇದು ಆ ಪಕ್ಷದಲ್ಲಿ ಅಧಿಕಾರದ ದಾಹಕ್ಕೆ ಹಿಡಿದ ಕನ್ನಡಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂರಾರು ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಹತ್ತು ಜನ ಈಗ ಸಿಎಂ ಗದ್ದುಗೆ ಏರಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಪೈಕಿ ಒಬ್ಬ ನಾಯಕರು 2018ರ ಚುನಾವಣೆ ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದರು. ಆದರೆ, ಈ ಮತ್ತೆ ಮುಖ್ಯಮಂತ್ರಿ ಗಾದಿ ಏರಲು ಹಪಹಪಿಸುತ್ತಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಆದರೆ, ಈಗಲೇ ಮುಖ್ಯಮಂತ್ರಿ ಕನಸು ಕಾಣುತ್ತಿ¨ªಾರೆ. ಕಾಂಗ್ರೆಸ್‌ನವರು ದಾಖಲೆಗಳು ಇಲ್ಲದೆ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿ¨ªಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರು ಹೇಳದೆ ವಾಗ್ಧಾಳಿ ನಡೆಸಿದರು.
ಬಿಜೆಪಿ ಅಧಿಕಾರಕ್ಕೆ ಕಾಂಗ್ರೆಸ್ ಕಾರಣ!:
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸ್ವತಃ ಕಾಂಗ್ರೆಸ್ ಕಾರಣ. ಇದನ್ನು ಮುಸ್ಲಿಂ ಬಾಂಧವರು ಅರ್ಥಮಾಡಿಕೊಳ್ಳಬೇಕು. 2006ರಲ್ಲಿ ಜೆಡಿಎಸ್ ಅನ್ನು ಮುಗಿಸಲು ಕಾಂಗ್ರೆಸ್ ಹೊರಟಿತ್ತು. ಆಗ ನಾವು ಎಚ್ಚೆತ್ತು, ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜತೆ ಹೋಗಬೇಕಾಯಿತು. ಆದರೂ ನಮ್ಮ ತತ್ವ, ಸಿದ್ಧಾಂತ ಬಿಟ್ಟುಕೊಡಲಿಲ್ಲ. ಅಂದು ಬಿಜೆಪಿಯವರೇ ನಮ್ಮ ಮನೆ ಬಾಗಿಲಿಗೆ ಬಂದರು. 2013ರಲ್ಲಿ ನಮ್ಮ ಹೋರಾಟದ ಫಲವಾಗಿ ಬಿಜೆಪಿ ಮೂರು ಭಾಗವಾಯಿತು ಎಂದು ಮೆಲುಕುಹಾಕಿದರು.
“ನಾನು ಅಧಿವೇಶನಕ್ಕೆ ಹೋಗುವುದನ್ನು ನಿಲ್ಲಿಸಿದ್ದೆ. ಇನ್ಮುಂದೆ ಮತ್ತೆ ಅಧಿವೇಶನಕ್ಕೆ ಬರುತ್ತೇನೆ. ಚರ್ಚೆಗೆ ಬರಲಿ ಮಾತನಾಡುತ್ತೇನೆ. ಸೂತಕದ ಮನೆಯಲ್ಲಿ ರಾಜಕೀಯ ಮಾಡಬಾರದು ಅಂತಾ ಸುಮ್ಮನಿದ್ದೆ. ಈಗ ನಮ್ಮ ಆಟ ಪ್ರಾರಂಭಿಸುತ್ತೇವೆ.ಇನ್ನು ಮುಂದೆ ನಮ್ಮ ಆಟ ಹೇಗಿರುತ್ತೆ ಎಂಬುದನ್ನು ನೋಡಲಿ’ ಎಂದು ಸವಾಲು ಹಾಕಿದರು.
“ರೈತರು ಬದುಕಲು ಹೇಗೆ ಸಾಧ್ಯ ಎಂಬುದನ್ನು ನನ್ನ ತೋಟದಲ್ಲಿ ಮಾಡಿ ತೋರಿಸುತ್ತೇನೆ. ಜ. 15ರಿಂದ ನನ್ನ ಕಾರ್ಯಕ್ರಮ ಏನು ಅನ್ನೋದನ್ನ ತಿಳಿಸುತ್ತೇನೆ’ ಎಂದು ಕುಮಾರಸ್ವಾಮಿ ತಿಳಿಸಿದರು.
“ನಾನು ಮುಖ್ಯಮಂತ್ರಿಯಾದರೆ ವೀರಶೈವ ಸಮಾಜ ಅತ್ಯಂತ ಗೌರವ ಕೊಡುವ ಪಂಚಾಕ್ಷರಿ ಕಾರ್ಯಕ್ರಮ ಕೊಡುತ್ತೇನೆ. ಆರೋಗ್ಯ, ರೈತ, ವಸತಿ, ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪಂಚರತ್ನ ಕಾರ್ಯಕ್ರಮಕ್ಕೆ ನಿರ್ಧರಿಸಿದ್ದೇನೆ. ಅದಕ್ಕೆ ಪಂಚಾಕ್ಷರಿ ಎಂದು ಹೆಸರಿಡಲಿದ್ದೇನೆ. ಐದು ವರ್ಷದಲ್ಲಿ ಒಂದೊಂದು ಕಾರ್ಯಕ್ರಮ ಕೊಡುತ್ತೇನೆ’ ಎಂದೂ ಹೇಳಿದರು.
ನಾನು ಈಗ ಬಿಡದಿ ತೋಟದ ಮನೆಯಲ್ಲಿ ವಾಸವಿದ್ದೇನೆ. ಬದುಕಿರುವವರೆಗೂ ಬಿಡದಿ ತೋಟದ ಮನೆಯೇ ನನ್ನ ಆಸ್ತಿ. ಯಾವ ವೆಸ್ಟ್ ಎಂಡ್ ಇಲ್ಲ; ರೈಟ್ ಎಂಡ್ ಇಲ್ಲ ಎಂದರು.
ಜೆಡಿಎಸ್ ಕ್ವಾರಂಟೇನ್‌ನಲ್ಲಿದೆ ಅಂತ ಬಿಜೆಪಿ ಉಸ್ತುವಾರಿ ಹೇಳಿದ್ದಾರೆ. ಇಲ್ಲಿಂದ ದುಡ್ಡು ತೆಗೆದುಕೊಂಡು ಹೋಗಲು ಬರುವ ಅರುಣ್ ಸಿಂಗ್ ನಮ್ಮ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಮ್ಮ ಜತೆ ಬಂದೆವು. ಆ ನಿಮ್ಮ ಸಹವಾಸದಿಂದ ನಮಗೆ ರೋಗ ಬಂತು ಎಂದು ಲೇವಡಿ ಮಾಡಿದರು.