ಬೆಳಗಾವಿ: ಜಿಲ್ಲೆಯ ಕ್ಯಾಸರ್ಲೋಕ್ ದಿಂದ ಕರಂಜೋಲ್ ರೈಲ್ವೆ ಸ್ಟೇಷನ್ ಮಧ್ಯದಲ್ಲಿ ನಿಜಾಮುದ್ದೀನ್ ಎಸ್ಪ್ರೇಸ್ ಎಂಜಿನ್ ಮೇಲೆ ಗುಡ್ಡ ಕುಸಿತವಾಗಿದ್ದು, ರೈಲು ಸಂಚಾರ ಬಂದ ಆಗಿದೆ.
ಬುಧವಾರ ನಿಜಾಮುದ್ದೀನ್ ದಿಂದ ವಾಸ್ಕೋಡಗಾಮ ಎಸ್ಪ್ರೇಸ್ ಎಂಜಿನ್ ಮೇಲೆ ಗುಡ್ಡ ಕುಸಿತವಾಗಿದ್ದು, ರೈಲ್ವೆ ಸ್ಥಳದಲ್ಲಿಯೇ ನಿಂತುಕೊಂಡಿದೆ. ಕ್ಯಾಸರ್ಲೊಕ್ ದಿಂದ ಕರಂಜೋಲ್ ರೈಲ್ವೆ ಸ್ಟೇಷನ್ ನಡುವೆ ಸಂಭವಿಸಿರುವ ಘಟನೆ ಸಂಭವಿಸಿದೆ. ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಜಿಲ್ಲೆಯಾದ್ಯಂತ ಕಳೆದ 3 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಹಲವು ನದಿಗಳು ತುಂಬಿ ಹರಿಯುತ್ತಿವೆ. ಇನ್ನೂ ಕೆಲವೆಡೆ ಸೇತುವೆಗಳು ಜಾಲವೃತ್ತಗೊಂಡಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿವೆ. ಜನರ ಸಹ ಮನೆಯಿಂದ ಹೊರ ಬರದಂತ ಸ್ಥಿತಿ ನಿರ್ಮಾಣವಾಗಿದೆ. ನದಿ ತೀರದ ಜನರಿಗೂ ಸಹ ಪ್ರವಾಹದ ಭೀತಿಯೂ ಉಂಟಾಗಿದೆ.