ಗೋಕಾಕ; ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಇತ್ತಿಚ್ಚಿಗೆ ತುಂಬಾ ಅಕ್ರಮ ಹಾಗೂ ಅವ್ಯವಹಾರ ಗಳು ಕಂಡು ಬರುತ್ತಿವೆ.
ಇಂದು ಗೋಕಾಕ ತಾಲೂಕಿನ ಶಿಂಧಿ ಕುರ್ ಬೇಟ ಗ್ರಾಮದಲ್ಲಿ ಅಕ್ರಮ ನಡೆದಿರುವ ಬಗ್ಗೆ
ಕರ್ನಾಟಕ ರಕ್ಷಣಾ ವೇದಿಕೆ
ಸ್ವಾಭಿಮಾನಿ ಬಣ ಆರೋಪ ವ್ಯಕ್ತ ಪಡಿಸಿದರು.

ತಾವು ಕೇಳಿದ ಮಾಹಿತಿ ಕೊಡುತ್ತಿಲ್ಲ ಹಾಗೂ
ಗ್ರಾಮ ಪಂಚಾಯತಿ ಅಡಿಯಲ್ಲಿ ನೀಡಿರುವ ಕಟ್ಟಡ ಹಾಗೂ, ಮಳಿಗೆ ಗಳು ಯಾವ ಇಸ್ವಿಯಲ್ಲಾಗಿವೆ ಹಾಗೂ ಇನ್ನಿತರ ಸಂಬಂಧ್ ಪಟ್ಟ ಕೆಲವು ದಾಖಲೆ ಗಳನ್ನ ಕೇಳಿದರು ಕೊಡುತ್ತಿಲ್ಲ. ಬಹುಶಃ ಇದರಲ್ಲಿ ಪ್ರಭಾವಿ ಗಳ ಕೈ ಇದೆ ಎಂಬುದು ಕರವೇ ಆರೋಪ ವಾಗಿದೆ.

ಇನ್ನು ಗೋಕಾಕ ತಾಲೂಕೂ ಅಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾದ ಸಂತೋಷ್ ಖಂಡ್ರೆ ಯವರ್ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು .
ಅನ್ಯಾಯ ವಾದಾಗ ಸದಾ ಕರವೇ ಸಿದ್ದ ಎಂಬುದು ಅಧ್ಯಕ್ಷರ ಮಾತಾಗಿದೆ
ಇನ್ನು ಮನವಿ ನೀಡಿದ ಅಧ್ಯಕ್ಷರು ಶೀಘ್ರದಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ..
Laxmi News 24×7