Breaking News

ಪಡಿತರ ಚೀಟಿದಾರರೇ ಗಮನಿಸಿ : ಜುಲೈ 1 ರಿಂದ `ಇಕೆವೈಸಿ’ ಪ್ರಕ್ರಿಯೆ ಆರಂಭ

Spread the love

ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಜುಲೈ 1 ರಿಂದ ರೇಷನ್ ಕಾರ್ಡ್ ಗೆ ಆಧಾರ್ ದೃಢೀಕರಣ (ಇಕೆವೈಸಿ) ಪ್ರಕ್ರಿಯೆ ಮತ್ತೆ ಶುರುವಾಗಲಿದೆ ಎಂದು ಹೇಳಿದೆ.

 

ನ್ಯಾಯಬೆಲೆ ಅಂಗಡಿ ವರ್ತಕರು ಕಡ್ಡಾಯವಾಗಿ ರೇಷನ್ ಕಾರ್ಡ್ ಗೆ ಆಧಾರ್ ಜೋಡಣೆ ಮಾಡಬೇಕು ಎಂದು ಆಹಾರ ಇಲಾಖೆ ಆದೇಶ ನೀಡಿದೆ. 5 ವರ್ಷಗಳ ಹಿಂದೆ ಆಹಾರ ಇಲಾಖೆ ವತಿಯಿಂದ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಗಳ ಪರಿಶೀಲನ ಕಾರ್ಯ ನಡೆದಿತ್ತು. ನಂತರ ಆಧಾರ್ ಜೋಡಣೆ ನಿಯಮ ತರಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಇಕೆವೈಸಿ ಪ್ರಕ್ರಿಯೆ ಜುಲೈ 1 ರಿಂದ ಮತ್ತೆ ಶುರುವಾಗಲಿದೆ.

 

ಪ್ರಸ್ತುತ ರಾಜ್ಯದಲ್ಲಿ 7,69,585 ಅಂತ್ಯೋದಯ, 1,16,84,911 ಬಿಪಿಎಲ್ ಮತ್ತು 19,41,962 ಎಪಿಎಲ್ ಸೇರಿ ಒಟ್ಟು 1,43,96,188 ಕಾರ್ಡ್ ಗಳಿದ್ದು, 4,87,33,221 ಸದಸ್ಯರಿದ್ದಾರೆ. ಕಳೆದ 5 ವರ್ಷಗಳಲ್ಲಿ ಅಂದಾಜು 10 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದಾರೆ. ಹೀಗಾಗಿ ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ -2013 ಪ್ರಕಾರ ಹಾಗೂ ಸುಪ್ರೀಂಕೋರ್ಟ್ ಆದೇಶದನ್ವಯ ಪಡಿತರ ಕಾರ್ಡ್ ಗೆ ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.


Spread the love

About Laxminews 24x7

Check Also

‘I Am god’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ….ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಗೆ ಸಾಥ್.

Spread the loveಬೆಂಗಳೂರು:ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ಅವರು ತಮ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ