ಬೆಳಗಾವಿ- ಬೆಳಗಾವಿ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ವಿಪರೀತವಾಗಿದೆ.ಪ್ರತಿಯೊಂದು ಬಡವಾಣೆಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದಾಗಿ ನಗರದಲ್ಲಿ ಭೌ…ಬೌ..ಚಳುವಳಿ ಶುರುವಾಗಿದೆ.
ಪ್ರಾಣಿ ದಯಾಮಯಿಗಳ ವಿಶೇಷ ಕಾಳಜಿಯಿಂದಾಗಿ ಬೆಳಗಾವಿಯಲ್ಲಿ ಬೀದಿ ನಾಯಿಗಳ ಸಂತತಿ ಹೆಚ್ಚಾಗಿದ್ದು.ಮಕ್ಕಳು ಮನೆಯ ಅಂಗಳದಲ್ಲಿ ಆಟ ಆಡುವದೇ ಕನಸಿನ ಮಾತಾಗಿದೆ.ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು.ಮಕ್ಕಳ ಮನೆಯ ಅಂಗಳದ ಆಟಕ್ಕೆ ಬ್ರೇಕ್ ಬಿದ್ದಿದೆ.
ನಾಯಿಗಳ ಸಂತತಿ ಕಂಟ್ರೋಲ್ ಮಾಡಲು,ಬೆಳಗಾವಿ ಮಹಾನಗರ ಪಾಲಿಕೆ ಪ್ರತಿ ವರ್ಷ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುತ್ತದೆ.ಬಹುಷ ಇವರು ಮಾಡುತ್ತಿರುವ ಆಪರೇಶನ್ ಫೇಲ್ ಆಗ್ತಾ ಇದೆಯೋ ಗೊತ್ತಿಲ್ಲ.ಆದ್ರೆ ನಾಯಿಗಳ ಸಂತತಿ ಹೆಚ್ಚಾಗುತ್ತಲೇ ಇದೆ.ಪ್ರತಿಯೊಂದು ಬಡಾವಣೆಯಲ್ಲೂ ಬೌ…ಬೌ ಪಡೆ ಸಾರ್ವಜನಿಕರಿಗೆ.ಮಕ್ಕಳಿಗೆ ಕಾಟ ಕೊಡುತ್ತಲೇ ಇದೆ.
ಇಂದು ಬೆಳಿಗ್ಗೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಬೌಬೌ ಪಡೆ ಯಾವ ರೀತಿ ಕಾವಲಕ್ಕೆ ನಿಂತಿದೆ ನೀವೇ ನೋಡಿ,ನಗರದ ಮುಖ್ಯ ವೃತ್ತದಲ್ಲೇ ಇಷ್ಡೊಂದು ನಾಯಿಗಳು ಆಶ್ರಯ ಪಡೆದಿರುವಾಗ.ಬಡಾವಣೆಗಳಲ್ಲಿ ಎಷ್ಟೊಂದು ನಾಯಿಗಳು ಇರಬಹುದು ನೀವೇ ಲೆಕ್ಕ ಹಾಕಿ…