Breaking News

ಧಾರವಾಡದಿಂದ ಬೆಂಗಳೂರಿಗೆ ಯಕೃತ್ತು ರವಾನೆ:ಏರ್ ಪೋರ್ಟ್ ವರೆಗೆ ಜಿರೋಟ್ರಾಫಿಕ್ ಮಾಡಿದ ಪೊಲೀಸರು

Spread the love

ಹುಬ್ಬಳ್ಳಿ: ಧಾರವಾಡ ಸಮೀಪದ ಎಸ್‌ಡಿಎಂ ಆಸ್ಪತ್ರೆಯಿಂದ ಲಿವರ್ (ಯಕೃತ್ತು) ಅನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಾಗಿಸಲು ಸುಮಾರು 16 ಕಿ.ಮೀ ದೂರದ ಮಾರ್ಗವನ್ನು ಪೊಲೀಸರು ಹಸಿರು ಕಾರಿಡಾರ್ ಮೂಲಕ ಅಂಬ್ಯುಲೆನ್ಸ್ ತ್ವರಿತ ತಲುಪಲು ಅನುವು ಮಾಡಿಕೊಟ್ಟರು.

ಜಿರೋ ಟ್ರಾಫಿಕ್ ನಲ್ಲಿ ಯಕೃತ್ ಇದ್ದ ಅಂಬ್ಯುಲೆನ್ಸ್ ನಿಗದಿಪಡಿಸಿದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಿತಲ್ಲದೆ, ಯಕೃತ್ ನ್ನು ವಿಮಾನದಲ್ಲಿ ಬೆಂಗಳೂರಿಗೆ ಕಳುಹಿಸಲಾಯಿತು.

ಮೃತ ಮಹಿಳೆಯೊಬ್ಬರ ಕಣ್ಣು, ಕಿಡ್ನಿ ಮತ್ತು ಲಿವರ್ ಸೇರಿದಂತೆ ವಿವಿಧ ಅಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದರು.

ಕಣ್ಣು ಮತ್ತು ಕಿಡ್ನಿಯನ್ನು ಎಸ್ ಡಿಎಂ ಆಸ್ಪತ್ರೆಯಲ್ಲಿ ತೆಗೆದುಕೊಂಡು ನಾಲ್ವರಿಗೆ ಅವನ್ನು ನೀಡಲಾಗಿತ್ತು. ಲಿವರ್ ಅನ್ನು ಬೆಂಗಳೂರಿನಲ್ಲಿನ ರೋಗಿಯೊಬ್ಬರಿಗೆ ಜೋಡಣೆ ಮಾಡುವುದಿತ್ತು. ಹೀಗಾಗಿ ಅದನ್ನು ಬೆಂಗಳೂರಿಗೆ ಸಾಗಿಸಲಾಯಿತು ಎಂದು ಎಸ್ ಡಿಎಂ ಆಸ್ಪತ್ರೆ ಮೂಲಗಳು ತಿಳಿಸಿವೆ.

 

 

ಲಿವರ್ ನೊಂದಿಗೆ ಬೆಳಗ್ಗೆ11:00 ಗಂಟೆ ಸುಮಾರಿಗೆ ಅಸ್ಪತ್ರೆಯಿಂದ ಹೊರಟ ಅಂಬ್ಯಲೆನ್ಸ್ 11:15 ರ ಸುಮಾರಿಗೆ ವಿಮಾನ ನಿಲ್ದಾಣ ತಲುಪಿತು. 11:30 ರ ಸುಮಾರಿಗೆ ಇಂಡಿಗೋ ವಿಮಾನದಲ್ಲಿ ಲಿವರ್ ಅನ್ನು ಸಾಗಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ವಿಮಾನ ಮೂಲಕ ಬೆಂಗಳೂರಿಗೆ ಲಿವರ್ ಒಯ್ಯುವ ಸಲುವಾಗಿ ಗ್ರೀನ್ ಕಾರಿಡಾರ್ ಮಾಡುವಂತೆ ಬೆಳಗ್ಗೆ 9:30 ಗಂಟೆ ಸುಮಾರಿಗೆ ಎಸ್‌ಡಿಎಂ ಆಸ್ಪತ್ರೆಯಿಂದ ಕರೆ ಬಂದಿತು. ನಾವು ಎಲ್ಲ ವ್ಯವಸ್ಥೆ ಮಾಡಿಕೊಂಡೆವು. ನಂತರ 16 ಕಿಮೀ ದೂರವನ್ನು ಕೇವಲ 15 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಿದೆವು ಎಂದು ಡಿಸಿಪಿ ರಾಮರಾಜನ್ ‘ಉದಯವಾಣಿ’ಗೆ ತಿಳಿಸಿದರು.


Spread the love

About Laxminews 24x7

Check Also

ನಾಗನೂರು ಪಟ್ಟಣದಲ್ಲಿ ವಿಭಾಗ ಹಾಗೂ ರಾಜ್ಯಮಟ್ಟದ ಖೋ ಖೋ ಟೂರ್ನಿಯಲ್ಲಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಭಾಗಿ

Spread the love ನಾಗನೂರು ಪಟ್ಟಣದಲ್ಲಿ ವಿಭಾಗ ಹಾಗೂ ರಾಜ್ಯಮಟ್ಟದ ಖೋ ಖೋ ಟೂರ್ನಿಯಲ್ಲಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಭಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ