ಸಾಗರ: ‘ರಾಜ್ಯದ ಮುಂದಿನ ಸಿ.ಎಂ. ಯಾರು ಎಂದು ಕಾಂಗ್ರೆಸ್ ನಾಯಕರು ಈಗಲೇ ಚರ್ಚಿಸುವುದು ನೇಣು ಹಾಕಿಕೊಂಡಂತಾಗಲಿದೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದಿನ ವಿಧಾನಸಭೆ ಚುನಾವಣೆ ಬರುವವರೆಗೂ ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಕಾಂಗ್ರೆಸ್ ಹೋರಾಟ ನಡೆಸಬೇಕೇ ಹೊರತು, ಈಗಲೇ ಮುಂದಿನ ಸಿ.ಎಂ. ಯಾರು ಎಂದು ಚರ್ಚಿಸುವುದು ಸಾಧುವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
Laxmi News 24×7