ಬೆಂಗಳೂರು, ಜೂ.25- ಆರು ಮಂದಿ ಕುಖ್ಯಾತ ದರೋಡೆಕೋರರನ್ನು ಬಂಧಿಸಿರುವ ರಾಮಮೂರ್ತಿ ನಗರ ಠಾಣೆ ಪೊಲೀಸರು 2.75 ಲಕ್ಷ ಬೆಲೆ ಬಾಳುವ 3 ದ್ವಿಚಕ್ರ ವಾಹನಗಳು, 6 ಮೊಬೈಲ್‍ಗಳು ಮತ್ತು 20 ಗ್ರಾಂ ತೂಕದ ಚಿನ್ನದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಆರ್.ಎಸ್.ಪಾಳ್ಯದ ಜಾನಕಿ ರಾಮ್ ಲೇ ಔಟ್ ನಿವಾಸಿ ಎಚ್.ವಿಶಾಲ್ ಅಲಿಯಾಸ್ ಸೋನು (21), ಆರ್.ಎಸ್.ಪಾಳ್ಯದ ಮುನಿಯಪ್ಪ ಕ್ರಾಸ್‍ನ ನಿವಾಸಿ ಅಯ್ಯಪ್ಪ (22), ಆರ್.ಎಸ್.ಪಾಳ್ಯದ ನಿವಾಸಿ ವಿಶಾಲ್ ಅಲಿಯಾಸ್ ಮೊಟ್ಟೆ (20). ಬಾಬು ಸಾಬ್ ಪಾಳ್ಯದ ನಿವಾಸಿ ಗುರುದತ್ (29), ನಾಗಯ್ಯನ ಪಾಳ್ಯದ ನಿವಾಸಿ ಮಣಿಕಂಠನ್ (19) ಮತ್ತು ಆರ್.ಎಸ್.ಪಾಳ್ಯದ ನಿವಾಸಿ ವಿಜಯ್‍ಕುಮಾರ್ ಬಂಧಿತ ಆರೋಪಿಗಳು.
ಈ ಆರೋಪಿಗಳ ಬಂಧನ ದಿಂದ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಡಕಾಯಿತಿ , 1 ಮನೆಗಳ್ಳತನ, ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಡಕಾಯಿತಿ ಪ್ರಕರಣಗಳು ಬೆಳಕಿಗೆ ಬಂದಿದೆ.