Breaking News

17 ಐಪಿಎಸ್ ಅಧಿಕಾರಿಗಳ ವರ್ಗಾವಣೆ………….

Spread the love

ಬೆಂಗಳೂರು : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಲಾಗಿದ್ದು,17 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ವಿಶೇಷ ಎಂದರೆ,ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಹಲವರಿಗೆ ಕೊರೋನಾ ದೃಢಪಟ್ಟಿದ್ದು ಅವರೆಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಗೃಹ ಇಲಾಖೆಯ ಕಾರ್ಯದರ್ಶಿ ಆಗಿದ್ದ ಎಡಿಜಿಪಿ ಉಮೇಶ್‌ಕುಮಾರ್ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಡಿ.ರೂಪಾ ಅವರು ವರ್ಗವಾಗಿದ್ದಾರೆ.

ಕಲಬುರ್ಗಿ ಎಸ್ಪಿ ಆಗಿದ್ದ ಇಡಾ ಮಾರ್ಟಿನ್ ಅವರನ್ನು ನಕ್ಸಲ್ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಸಿಮಿ ಮರಿಯಂ ಜಾರ್ಜ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ರಾಯಚೂರು ಎಸ್ಪಿ ಆಗಿದ್ದ ಸಿ.ಬಿ.ವೇದಮೂರ್ತಿ ಅವರನ್ನು ಗುಪ್ತದಳಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ನಿಕ್ಕಂ ಪ್ರಕಾಶ್ ಅವರು ವರ್ಗವಾಗಿದ್ದಾರೆ.

https://youtu.be/uiE8UjGW7jE

 

ವೈಟ್ ಫೀಲ್ಡ್ ವಿಭಾಗಕ್ಕೆ ಡಿ.ದೇವರಾಜು ಅವರನ್ನು ವರ್ಗಾವಣೆ ಮಾಡಲಾಗಿದೆ. ಸಂಜೀವ್ ಪಾಟೀಲ್ ಪಶ್ಚಿಮ ವಿಭಾಗಕ್ಕೆ ವರ್ಗಾವಣೆ ಮಾಡಿ ನೇಮಕ ಮಾಡಲಾಗಿದೆ.

ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಸಿಐಡಿಗೆ ವರ್ಗಾವಣೆ ಆಗಿದ್ದು, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಸ್ಥಳಕ್ಕೆ ವೈರ್‌ಲೆಸ್‌ ವಿಭಾಗದ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

 

# ವರ್ಗಾವಣೆಯಾದ ಹಿರಿಯ ಅಧಿಕಾರಿಗಳ ಪಟ್ಟಿ ಹೀಗಿದೆ : 
* ರೂಪಾ ಡಿ- ಐಜಿಪಿ, ಗೃಹ ಇಲಾಖೆ
* ಡಾ. ರೋಹಿಣಿ ಕಟೋಚ್ ಸಪೆಟ್- ಎಸ್​ಪಿ, ಸಿಐಡಿ ಬೆಂಗಳೂರು
* ಬಿ. ರಮೇಶ್- ಎಸ್​ಪಿ, ಸಿಐಡಿ ಬೆಂಗಳೂರು
* ನಿಕಮ್ ಪ್ರಕಾಶ್ ಅಮೃತ್- ಎಸ್​ಪಿ ರಾಯಚೂರು ಜಿಲ್ಲೆ
* ಧರ್ಮೇಂದ್ರ ಕುಮಾರ್ ಮೀನ- ಡಿಸಿಪಿ ಉತ್ತರ ವಿಭಾಗ ಬೆಂಗಳೂರು ನಗರ
* ಹರೀಶ್ ಪಾಂಡೆ- ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು ನಗರ
* ಡಾ. ಸಿಮಿ ಮರಿಯಮ್ ಜಾರ್ಜ್- ಎಸ್​ಪಿ ಕಲಬುರಗಿ ಜಿಲ್ಲೆ
* ಡಿ. ದೇವರಾಜ- ಡಿಸಿಪಿ ವೈಟ್​ ಫೀಲ್ಡ್ ವಿಭಾಗ, ಬೆಂಗಳೂರು ನಗರ
* ಸಂಜೀವ್ ಎಮ್​ ಪಾಟೀಲ್- ಡಿಸಿಪಿ ಪಶ್ಚಿಮ ವಿಭಾಗ ಬೆಂಗಳೂರು ನಗರ
* ಡಾ. ಸಿ ಬಿ ವೇದಮೂರ್ತಿ- ಎಸ್​ಪಿ, ಗುಪ್ತಚರ ಇಲಾಖೆ ಬೆಂಗಳೂರು
* ಮೊಹಮ್ಮದ್ ಸುಜೀತ್- ಡಿಸಿಪಿ, ಸಿಟಿ ಆರ್ಮ್ಡ್​ ರಿಸರ್ವ್, ಹೆಡ್​ ಕ್ವಾರ್ಟರ್ಸ್​ ಬೆಂಗಳೂರು
* ಡಾ. ಸುಮನ್ ಡಿ. ಪನ್ನೇಕರ್- ಡೆಪ್ಯುಟಿ ಡೈರೆಕ್ಟರ್, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
* ಇಳಕ್ಕಿಯ ಕರುಣಾಗರನ್- ಎಸ್​ಪಿ ಕೆಜಿಎಫ್, ಕೋಲಾರ ಜಿಲ್ಲೆ
* ಇಯಾದ ಮಾರ್ಟಿನ್ ಮಾರ್ಬನಿಯಂಗ್- ಎಸ್​ಪಿ, ಆ್ಯಂಟಿ ನಕ್ಸಲ್ ಫೋರ್ಸ್ ಕಾರ್ಕಳ, ಉಡುಪಿ
* ಎಮ್​ಎನ್​ ಅನುಚೇತ್- ಡಿಸಿಪಿ, ಕೇಂದ್ರ ವಿಭಾಗ ಬೆಂಗಳೂರು
* ಎನ್​ ಶಶಿಕುಮಾರ್- ಎಸ್​ಪಿ ವೈರ್​ಲೆಸ್​, ಬೆಂಗಳೂರು
* ಉಮೇಶ್ ಕುಮಾರ್- ಎಡಿಜಿಪಿ ಸಿಐಡಿ ಬೆಂಗಳೂರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ