ಚಿಕ್ಕೋಡಿ: ದುರ್ಗಾ ಮಾತೆ ಇರುವಾಗ ನಮಗೇಕೆ ಕೊರೊನಾ ಲಸಿಕೆ ಎನ್ನುವ ಅಲೆಮಾರಿ ಜನಾಂಗಕ್ಕೆ ಕೊರೊನಾ ಭಯವೇ ಇಲ್ಲದಂತಿರುವುದು ಚಿಕ್ಕೋಡಿಯಲ್ಲಿ ಕಂಡುಬಂದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ಕೊರೊನಾ ರೋಗದ ಭಯವೇ ಇಲ್ಲ. ಕೊರೊನಾ ರೋಗ ನಮಗೆ ಬರುವದಿಲ್ಲ. ಈ ರೋಗಕ್ಕೂ ನಾವು ಹೆದರುವದಿಲ್ಲ. ಎಕೆಂದರೇ ನಮ್ಮನ್ನ ದುರ್ಗಾಮಾತಾ ರಕ್ಷಣೆ ಮಾಡುತ್ತಾಳೆ ಎನ್ನುವ ನಂಬಿಕೆಯಲ್ಲಿ ಈ ಜನಾಂಗದ ಜನರಿದ್ದಾರೆ.

ಇಡೀ ಜಗತ್ತನ್ನೇ ಕೊರೊನಾ ಮಹಾಮಾರಿ ತನ್ನ ಭಯದಲ್ಲಿ ಇಟ್ಟುಕೊಂಡಿದೆ. ಆದರೆ ಈ ಜನರಿಗೆ ಮಾತ್ರ ಕೊರೊನಾ ಎಂದರೇ ಯಾವುದೇ ಭಯವಿಲ್ಲ. ದೈವ ಶಕ್ತಿಯಿದೆ ಕೊರೊನಾ ರೋಗ ನಮ್ಮ ಬಳಿ ಸುಳಿಯುವದಿಲ್ಲ ಎನ್ನುವ ನಿರ್ಭಯದಿಂದ ಈ ಜನಾಂಗ ಜೀವನ ನಡೆಸುತ್ತಿದೆ.

ದುರ್ಗಾಮಾತೆ ಕಾಪಾಡುತ್ತಾಳೆ. ನಾವು ಹಂದಿ ತಿನ್ನುತ್ತೆವೆ. ನಮಗೆ ಕೊರೊನಾ ರೋಗದ ಭಯವೇ ಇಲ್ಲ. ಯಾವುದೇ ಕಾರಣಕ್ಕೂ ನಾವು ಕೊರೊನಾ ಲಸಿಕೆಯನ್ನು ಪಡೆಯುವದಿಲ್ಲ. ನಮಗೆ ಯಾವುದೇ ಲಸಿಕೆಯ ಅವಶ್ಯಕತೆಯಿಲ್ಲ ಎನ್ನುವ ಈ ಈ ಜನ ಮಾತ್ರ ದೈವ ನಂಬಿಕೆಯಲ್ಲಿರಿವದು ನಿಜಕ್ಕೂ ಅಚ್ಚರಿಯೇ ಸಂಗತಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಜನರಿಗೆ ತಿಳುವಳಿಕೆ ಹೇಳಿ ಕೊರೊನಾ ಲಸಿಕೆ ನೀಡುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸ್ಥಳಿಯರು ಹೇಳುತ್ತಿದ್ದಾರೆ.
Laxmi News 24×7