Breaking News

ಕರ್ನಾಟಕ; ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಇಳಿಕೆ

Spread the love

ಬೆಂಗಳೂರು, ಜೂನ್ 15; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಜೊತೆಗೆ ಸಾವಿನ ಪ್ರಮಾಣವೂ ಇಳಿಕೆಯಾಗಿದೆ. ಸೋಮವಾರ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿನ ಮರಣ ಪ್ರಮಾಣ ಶೇ 1.75.

ಲಾಕ್‌ಡೌನ್ ಘೋಷಣೆ ಬಳಿಕ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಮರಣ ಪ್ರಮಾಣ ಕಡಿಮೆಯಾಗದಿರುವುದು ಚಿಂತೆಗೆ ಕಾರಣವಾಗಿತ್ತು. ಸರ್ಕಾರ ಸಹ ಜಿಲ್ಲಾಡಳಿತಕ್ಕೆ ಮರಣ ಪ್ರಮಾಣ ಕಡಿಮೆ ಮಾಡಲು ಸೂಚನೆಗಳನ್ನು ನೀಡಿತ್ತು.

 

ಸೋಮವಾರದ ವರದಿಯಂತೆ ರಾಜ್ಯದಲ್ಲಿ 120 ಜನರು ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 33,033. ಸಕ್ರಿಯ ಪ್ರಕರಣಗಳಲ್ಲೂ ಗಣನೀಯ ಇಳಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,72,141.

 

ಹೆಲ್ತ್ ಬುಲೆಟಿನ್ ಪ್ರಕಾರ 25 ಜನರು ಮೈಸೂರಿನಲ್ಲಿ, 12 ಜನರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ದಾವಣಗೆರೆ ಮತ್ತು ಧಾರವಾಡದಲ್ಲಿ 10 ಜನರು ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 27,71,969.

 

ಸೋಮವಾರ ದಾಖಲಾದ ಸಾವಿನ ಸಂಖ್ಯೆ ಮತ್ತು ಹೊಸ ಪ್ರಕರಣಗಳ ಸಂಖ್ಯೆ ಎರಡು ತಿಂಗಳಿನಲ್ಲಿಯೇ ಕನಿಷ್ಠವಾಗಿದೆ. 6835 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಇದರಲ್ಲಿ ಬೆಂಗಳೂರಿನ 1470 ಹೊಸ ಪ್ರಕರಣ ಸೇರಿದೆ.

ದಕ್ಷಿಣ ಕನ್ನಡದಲ್ಲಿ 648. ಹಾಸನದಲ್ಲಿ 507. ಮೈಸೂರಿನಲ್ಲಿ 670 ಅಧಿಕ ಪ್ರಕರಣಗಳು ವರದಿಯಾಗಿವೆ. ಕರ್ನಾಟಕ ಸರ್ಕಾರ ಲಾಕ್‌ಡೌನ್ ನೀತಿಯಲ್ಲಿ ಕೆಲವು ವಿನಾಯಿತಿಗಳನ್ನು ಘೋಷಣೆ ಮಾಡಿದೆ. ಆದರೆ ಪಾಸಿಟಿವಿಟಿ ದರ ಹೆಚ್ಚಿರುವ 11 ಜಿಲ್ಲೆಗಳಲ್ಲಿ ಜೂನ್ 21ರ ತನಕ ಲಾಕ್‌ಡೌನ್ ಮುಂದುವರೆಯಲಿದೆ.

ಕೋವಿಡ್ ಮಾದರಿಗಳ ಪರೀಕ್ಷೆಗಳನ್ನು ಸಹ ಸರ್ಕಾರ ಹೆಚ್ಚಿಸಿದೆ. ಸೋಮವಾರದ ವರದಿ ಅನ್ವಯ 31828 ಆಂಟಿಜೆನ್, 1,17,914 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 1,49,742 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿನ ಖಚಿತ ಕೋವಿಡ್ ಪ್ರಕರಣಗಳ ಶೇಕಡಾವಾರು ಪ್ರಮಾಣ 4.56 ಆಗಿದೆ.

ಲಾಕ್‌ಡೌನ್ ಪರಿಣಾಮ ರಾಜ್ಯದಲ್ಲಿ ಹೊಸ ಪ್ರಕರಣ, ಮರಣ ಪ್ರಮಾಣ ಕಡಿಮೆಯಾಗಿದೆ. ರಾಜ್ಯದಲ್ಲಿ ಇದುವರೆಗೂ 2566774 ಜನರು ಗುಣಮುಖಗೊಂಡಿದ್ದಾರೆ.

ಯಾದಗಿರಿ (20), ರಾಮನಗರ (26), ರಾಯಚೂರು (33), ಕೊಪ್ಪಳ (95), ಕಲಬುರಗಿ (31), ಹಾವೇರಿ (63), ಗದಗ (28), ಬೀದರ್ (14) ಮತ್ತು ಬಾಗಲಕೋಟೆ (57) ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿಕೆಯಾಗಿದೆ.

ಸಕ್ರಿಯ ಪ್ರಕರಣ; ರಾಜ್ಯದಲ್ಲಿ ಮೈಸೂರು 11103. ಬೆಂಗಳೂರಿನಲ್ಲಿ 85044. ದಕ್ಷಿಣ ಕನ್ನಡ 6954. ದಾವಣಗೆರೆ 4268. ಹಾಸನ 7199. ತುಮಕೂರು 6104. ಮಂಡ್ಯ 3652. ಉತ್ತರ ಕನ್ನಡ 2442. ಉಡುಪಿ 2977 ಸಕ್ರಿಯ ಪ್ರಕರಣಗಳು ಇವೆ.


Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ